ದಯಾಮರಣದ ಪ್ರಕ್ರಿಯೆ ಸರಳಗೊಳಿಸಿದ ಸುಪ್ರೀಂಕೋರ್ಟ್

Update: 2023-01-24 17:30 GMT

ಹೊಸದಿಲ್ಲಿ, ಜ. 24: ದಯಾ ಮರಣ (ಪ್ಯಾಸಿವ್ ಎಥುನಾಷಿಯ)ದ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಸರಳಗೊಳಿಸಿದೆ. ಗುಣಪಡಿಸಲಾಗದ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ದಯಾಮರಣ ನೀಡಲು ಜೀವ ರಕ್ಷಕ ವ್ಯವಸ್ಥೆಯನ್ನು ಹಿಂಪಡೆಯುವ ಅಥವಾ ತಡೆಯುವ ಮೂರು ಹಂತದ ಪ್ರಕ್ರಿಯೆಯ ಬದಲಿಗೆ ಎರಡು ಹಂತದ ಪ್ರಕ್ರಿಯೆಗೆ ನ್ಯಾಯಾಲಯ ಅನುಮತಿ ನೀಡಿದೆ. 

ನೂತನ ಮಾರ್ಗಸೂಚಿಗಳು ಜೀವರಕ್ಷಕ ವ್ಯವಸ್ಥೆಯನ್ನು ಹಿಂದೆ ಪಡೆಯಲು ಅಥವಾ ತಡೆ ಹಿಡಿಯಲು ವೈದ್ಯರು ಹಾಗೂ ರೋಗಿಯ ಕುಟುಂಬವು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಅನುಮೋದನೆ ಪಡೆಯಬೇಕಾದ ತೊಡಕಿನ ಮೂರು ಹಂತದ ಕಾರ್ಯ ವಿಧಾನವನ್ನು ತೆಗೆದು ಹಾಕುತ್ತದೆ.  

ಹೊಸ ಮಾರ್ಗಸೂಚಿಗಳು ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ನಿರಂತರ  ಕೋಮಾ, ಮೆದುಳು ನಿಷ್ಕ್ರಿಯ, ಗುಣಪಡಿಸಲಾಗದ ಕಾಯಿಲೆ ಹಾಗೂ ದೀರ್ಘಕಾಲ ಜೀವರಕ್ಷಕ ವ್ಯವಸ್ಥೆಯಲ್ಲಿ ಇರುವ ರೋಗಿಗಳ ಪ್ರಕರಣವನ್ನು ನಿರ್ವಹಿಸುವಾಗ ಆಸ್ಪತ್ರೆಗಿರುವ ಕಾನೂನು ನಿರ್ಬಂಧಗಳನ್ನು ನಿವಾರಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

Similar News