×
Ad

ಲಕ್ನೊದಲ್ಲಿ ಕಟ್ಟಡ ಕುಸಿತ: ಸಮಾಜವಾದಿ ಪಕ್ಷದ ಶಾಸಕನ ಪುತ್ರನ ಬಂಧನ

Update: 2023-01-25 14:56 IST

ಲಕ್ನೊ: ಲಕ್ನೊದಲ್ಲಿ ಮಂಗಳವಾರ ಸಂಭವಿಸಿದ  ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಶಾಸಕರೊಬ್ಬರ ಪುತ್ರನನ್ನು ನಿನ್ನೆ ತಡರಾತ್ರಿ ಬಂಧಿಸಲಾಗಿದೆ. 

ಲಕ್ನೊದ ಹಝರತ್‌ಗಂಜ್ ವಝೀರ್ ಹಸನ್ ರಸ್ತೆಯಲ್ಲಿರುವ ಅಲಯಾ ಅಪಾರ್ಟ್‌ಮೆಂಟ್ ಕಟ್ಟಡವು ಸಮಾಜವಾದಿ ಪಕ್ಷದ ಶಾಸಕ ಶಾಹಿದ್ ಮಂಝೂರ್ ಅವರ ಮಗ ಹಾಗೂ ಸೋದರಳಿಯನ ಒಡೆತನದಲ್ಲಿದೆ.

ಮಾಜಿ ಸಚಿವ ಶಾಹಿದ್  ಅವರ ಪುತ್ರ ನವಾಝಿಶ್ ಅವರನ್ನು ಮೀರತ್‌ನಲ್ಲಿ ನಿನ್ನೆ ತಡರಾತ್ರಿ ಬಂಧಿಸಲಾಗಿದ್ದು, ಲಕ್ನೊಗೆ ಕರೆತರಲಾಗುತ್ತಿದೆ.

ಸುಮಾರು 12 ವರ್ಷಗಳ ಹಿಂದೆ ಅಪಾರ್ಟ್‌ಮೆಂಟ್ ಕಟ್ಟಡ ನಿರ್ಮಾಣವಾಗಿದ್ದು, 12 ಫ್ಲಾಟ್‌ಗಳಿವೆ. ಅವುಗಳಲ್ಲಿ ಹೆಚ್ಚಿನವು ಖಾಲಿಯಿದ್ದವು ಹಾಗೂ  ನೆಲ ಮಹಡಿಯಲ್ಲಿ ಅದರ ಪಾರ್ಕಿಂಗ್ ಜಾಗದಲ್ಲಿ ಕೆಲಸ ನಡೆಯುತ್ತಿದೆ.

ಮೂವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು,  ಎನ್‌ಡಿಆರ್‌ಎಫ್, ಪೊಲೀಸರು ಹಾಗೂ  ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Similar News