×
Ad

ಸಂಕಷ್ಟದಲ್ಲಿ ಸಿಲುಕಿರುವ ಸೂರತ್‌ನ ವಜ್ರೋದ್ಯಮ ಘಟಕಗಳು

6 ತಿಂಗಳ ಅವಧಿಯಲ್ಲಿ ಕೆಲಸ ಕಳೆದುಕೊಂಡ 20,000 ಕಾರ್ಮಿಕರು

Update: 2023-01-25 18:56 IST

ಅಹ್ಮದಾಬಾದ್: ಸೂರತ್‌ನ ವಜ್ರೋದ್ಯಮವು ಸರ್ಕಾರಿ ಬೆಂಬಲವಿಲ್ಲದೆ ಹಾಗೂ ಉದ್ಯಮ ಸ್ನೇಹಿಯಲ್ಲದ ರಫ್ತು ನೀತಿ, ರಶ್ಯ-ಉಕ್ರೇನ್‌ ಯುದ್ಧ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ಥಿಕ ಹಿಂಜರಿಕೆಯಿಂದ ಸಂಕಷ್ಟದಲ್ಲಿ ಸಿಲುಕಿದೆ ಎಂದು newsclick.in ವರದಿ ಮಾಡಿದೆ.

ಜಾಗತಿಕವಾಗಿ ವಜ್ರಕ್ಕೆ ಬೇಡಿಕೆ ಶೇ. 30 ರಷ್ಟು ಕುಸಿದಿರುವುದರಿಂದ ಸೂರತ್‌ನ 7000 ಕ್ಕೂ ಅಧಿಕ ವಜ್ರ ಕಟ್ಟಿಂಗ್‌ ಮತ್ತು ಪಾಲಿಶಿಂಗ್‌ ಉದ್ಯಮಗಳು ಸ್ಥಗಿತಗೊಂಡಿವೆ.  ಇದರಿಂದ ಕಳೆದ ಆರು ತಿಂಗಳ ಅವಧಿಯಲ್ಲಿ ಸುಮಾರು 20,000 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.

ಸುಮಾರು 8 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಸೂರತ್‌ನ ಸುಮಾರು 4000 ವಜ್ರ ಕಟ್ಟಿಂಗ್‌ ಮತ್ತು ಪಾಲಿಶಿಂಗ್‌ ಉದ್ದಿಮೆಗಳು ಈಗ ಬಹಳ ಕಷ್ಟದ ಪರಿಸ್ಥಿತಿಯೆದುರಿಸುತ್ತಿದ್ದು ಸಣ್ಣ ಘಟಕಗಳ ಪರಿಸ್ಥಿತಿ ಹೇಳತೀರದಾಗಿದೆ.

ಪಾಲಿಶ್‌ ಮಾಡಿದ ವಜ್ರಗಳಿಗೆ ಗರಿಷ್ಠ ಬೇಡಿಕೆ ಅಮೆರಿಕಾದಿಂದ ಇದ್ದರೆ ನಂತರದ ಸ್ಥಾನ ಚೀನಾದ್ದಾಗಿದೆ. ಆದರೆ ಚೀನಾದಲ್ಲಿ ಕೋವಿಡ್‌ ಸಮಸ್ಯೆಯಿಂದ ಬೇಡಿಕೆ ಕುಸಿದಿದೆ.

ಕೆಲಸ ಕಳೆದುಕೊಂಡಿರುವ ನೂರಾರು ಕಾರ್ಮಿಕರು ಬೇರೆ ಉದ್ಯೋಗ ಪಡೆಯಲು ಹರಸಾಹಸ ಪಡುತ್ತಿದಾರೆ. ಇತ್ತೀಚೆಗಷ್ಟೇ ಕಟರ್ಗಮ್‌ ಎಂಬಲ್ಲಿನ ಘಟಕವೊಂದು ಮುಚ್ಚಿದ ಪರಿಣಾಮ 700 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.

Similar News