ಕಾಪುವಿನಲ್ಲಿ ಗಣರಾಜ್ಯೋತ್ಸವ ಆಚರಣೆ

Update: 2023-01-26 16:47 GMT

ಕಾಪು: ನಮ್ಮ ದೇಶದ ಸಂವಿಧಾನದ ಆಶಯಗಳನ್ನು ಅರ್ಥಮಾಡಿಕೊಂಡು, ಸಂವಿಧಾನಕ್ಕೆ ಗೌರವ ಕೊಟ್ಟು ಬಾಳ್ವೆ ನೀಡೋಣ. ನಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಮೆರೆಯುವುದಕ್ಕಿಂತ ಭಾರತೀಯತೆ, ರಾಷ್ಟ್ರೀಯತೆಯನ್ನು ಮೆರೆಯುವ ಕಾಲಘಟ್ಟ ಇದಾಗಿದೆ ಎಂದು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅಭಿಪ್ರಾಯಪಟ್ಟರು.

ಕಾಪು ತಾಲ್ಲೂಕು ಆಡಳಿತ ವತಿಯಿಂದ ಕಾಪುವಿನ  ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ, ದೇಶಕ್ಕೆ ಅಮೃತ ಮಹೋತ್ಸವದ ಸಂಭ್ರಮವಾದರೆ, ಜಿಲ್ಲೆಗೆ ರಜತ ವರ್ಷಾಚರಣೆಯ ಸಂಭ್ರಮವಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನೀಲ ನಕಾಶೆಯನ್ನು ಸಿದ್ಧ ಪಡಿಸಿಕೊಂಡು ಯೋಜನೆ ರೂಪಿಸಲಾಗಿದೆ ಎಂದರು. 

ಶೈಕ್ಷಣಿಕ ಸಾಧಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಗ್ರಾಮ ವನ್ ಸೇವೆಯ ಸಾಧಕರಾದ ಸಹನಾ ದಯಾನಂದ, ಧೀರೇಶ್ ಡಿ.ಪಿ., ಪ್ರಜ್ವಲ್ ಅವರನ್ನು ಗೌರವಿಸಲಾಯಿತು. 

ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ, ಕಾಪು ಪುರಸಭಾ ಸದಸ್ಯರಾದ ಶಂಕರ್ ಸುವರ್ಣ, ಸರಿತಾ ಪೂಜಾರಿ, ನಾಗೇಶ್, ವಿದ್ಯಲತಾ ಸುವರ್ಣ, ಸರಿತಾ, ಉಮೇಶ್ ಕರ್ಕೇರ, ಶೈಲೇಶ್ ಅಮೀನ್, ಎಸ್‍ಐಗಳಾದ ರಾಘವೇಂದ್ರ ಸಿ., ಶ್ರೀ ಶೈಲ ಮುರಗೋಡ, ಪುರುಷೋತ್ತಮ, ಅನಿಲ್ ಕುಮಾರ್, ತಾಲ್ಲೂಕು ಪಂಚಾಯಿತಿ ಲೆಕ್ಕಾಧಿಕಾರಿ ಸುಂದರ ನಾಯ್ಕ್ ಉಪಸ್ಥಿತರಿದ್ದರು. 

ವೆಂಕಟೇಶ್ ನಾವುಡ ಸ್ವಾಗತಿಸಿದರು. ರಾಜೇಂದ್ರ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸ್ಟೀವನ್ ಕ್ವಾಡ್ರಸ್ ವಂದಿಸಿದರು. 

Similar News