×
Ad

ಬಾಲ ಪುರಸ್ಕಾರ ಪ್ರಶಸ್ತಿ ಪಡೆದ ಬೆಂಗಳೂರಿನ ಬಾಲಕನ ಐಕ್ಯೂ ಆಲ್ಬರ್ಟ್ ಐನ್‌ಸ್ಟೈನ್‌ ಗಿಂತ ಹೆಚ್ಚು

8 ಹರೆಯದ ರಿಷಿ ಶಿವ ಪ್ರಸನ್ನ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ...

Update: 2023-01-26 23:14 IST

ಬೆಂಗಳೂರಿನ ಎಂಟು ವರ್ಷದ ಬಾಲಕ ರಿಷಿ ಶಿವ ಪ್ರಸನ್ನ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಪಡೆದವರಲ್ಲಿ ಒಬ್ಬರು. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ 3 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದಕ್ಕಾಗಿ ಪ್ರಸನ್ನ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಸನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು. 

ಪ್ರಸನ್ನ ಅವರ ಐಕ್ಯೂ ಆಲ್ಬರ್ಟ್ ಐನ್‌ಸ್ಟೈನ್‌ಗಿಂತ ಐಕ್ಯೂಗಿಂತ ಹೆಚ್ಚಾಗಿದೆ. ಐನ್‌ಸ್ಟೈನ್‌ ಅವರು 160 ಐಕ್ಯೂ ಹೊಂದಿದ್ದು, ಪ್ರಸನ್ನ ಅವರು 180 ರ ಪ್ರಮಾಣೀಕೃತ IQ ಅನ್ನು ಹೊಂದಿದ್ದಾರೆ.

ಐಕ್ಯೂ ಎನ್ನುವುದು ಒಬ್ಬರ ಬುದ್ಧಿಮತ್ತೆಯ ಪ್ರಮಾಣಿತ ಅಳತೆಯಾಗಿದೆ.   ಸಾಮಾನ್ಯ ಜನರಲ್ಲಿ 85-115 ಐಕ್ಯೂ ಇದ್ದರೆ, 130 ಕ್ಕೂ ಅಧಿಕ ಐಕ್ಯೂ ಹೊಂದಿರುವ ವ್ಯಕ್ತಿಯನ್ನು ಅತ್ಯಂತ ಬುದ್ಧಿವಂತ ಎಂದು ಪರಿಗಣಿಸಲಾಗುತ್ತದೆ.

ಎಂಟನೇ ವಯಸ್ಸಿನಲ್ಲಿ, ಪ್ರಸನ್ನ ಅವರು ಅತ್ಯಂತ ಕಿರಿಯ ಯೂಟ್ಯೂಬರ್ ಆಗಿದ್ದಾರೆ ಮತ್ತು ಅವರ ಯೂಟ್ಯೂಬ್ ವೀಡಿಯೊಗಳಲ್ಲಿ ಅವರು ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಅವರು ವೈಜ್ಞಾನಿಕ ಕ್ಷೇತ್ರದಲ್ಲಿ ಆಳವಾದ ಆಸಕ್ತಿಯನ್ನು ತೋರುತ್ತಿದ್ದಾರೆ ಮತ್ತು ವರದಿಗಳ ಪ್ರಕಾರ ಪ್ರಸನ್ನ ಅವರು ಮೂರು ವರ್ಷ ವಯಸ್ಸಿನಲ್ಲೇ ಸೌರವ್ಯೂಹಗಳು, ಗ್ರಹಗಳು, ಬ್ರಹ್ಮಾಂಡದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ.

Similar News