×
Ad

ಹಿರಿಯ ಸ್ಟಂಟ್ ಮಾಸ್ಟರ್ 'ಜುಡೋ' ರತ್ನಮ್ ನಿಧನ

Update: 2023-01-27 12:14 IST

ಚೆನ್ನೈ: ಹಲವು ತಮಿಳು ಚಿತ್ರಗಳ ಸ್ಟಾರ್ ಗಳೊಂದಿಗೆ ಕೆಲಸ ಮಾಡಿರುವ ಹಿರಿಯ ಸ್ಟಂಟ್ ಮಾಸ್ಟರ್ ‘ಜುಡೋ’ ರತ್ನಮ್ ಗುರುವಾರ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ರಜನೀಕಾಂತ್ ಸಹಿತ ಹಲವು ನಟರಿಗೆ ಕೆ.ಕೆ. ರತ್ನಂ ರೋಮಾಂಚನಕಾರಿ ಸಾಹಸ ದೃಶ್ಯವನ್ನು ಸಂಯೋಜಿಸಿದ್ದಾರೆ.1959 ರಲ್ಲಿ ತಮರೈ ಕುಲಮ್ ನಲ್ಲಿ ಖಳನಟನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಅದರಲ್ಲಿ ಸಾಹುಕಾರ್ ಜಾನಕಿ ಹಾಗೂ ಎಂಆರ್ ರಾಧಾ ಅವರೊಂದಿಗೆ ನಟಿಸಿದ್ದರು. ನಂತರ ಅವರು ಸಾಹಸ ಕಲಾವಿದರನಾಗಿ ವೃತ್ತಿ ಆರಂಭಿಸಿದರು.

Similar News