×
Ad

ದುಬೈಗೆ ಹೋಗಲು ಜಾಕೆಲಿನ್ ಫೆರ್ನಾಂಡಿಸ್ ಗೆ ನ್ಯಾಯಾಲಯ ಅನುಮತಿ

Update: 2023-01-27 21:53 IST

ಹೊಸದಿಲ್ಲಿ, ಜ. 27: ಬಾಲಿವುಡ್ ನಟಿ ಜಾಕಲೀನ್ ಫೆರ್ನಾಂಡಿಸ್(Jacqueline Fernandez) ದುಬೈಗೆ ಪ್ರಯಾಣಿಸಲು ದಿಲ್ಲಿಯ ನ್ಯಾಯಾಲಯವೊಂದು ಶುಕ್ರವಾರ ಅನುಮತಿ ನೀಡಿದೆ.

ಸಮ್ಮೇಳನವೊಂದರಲ್ಲಿ ಭಾಗವಹಿಸುವುದಕ್ಕಾಗಿ ನನಗೆ ದುಬೈಗೆ ಹೋಗಲು ಅವಕಾಶ ನೀಡಬೇಕು ಎಂದು ಕೋರಿ ನಟಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ವಂಚನೆಯ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್(Sukesh Chandrasekhar) ಒಳಗೊಂಡ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಫೆರ್ನಾಂಡಿಸ್ ಕೂಡ ಆರೋಪಿಯಾಗಿದ್ದಾರೆ.

Similar News