×
Ad

ಟ್ವೀಟ್ ಗಳನ್ನು ನಿರ್ಬಂಧಿಸುವ ಸರಕಾರದ ಆದೇಶ 2014ರಲ್ಲಿ 8 ಇದ್ದುದು 2022ರಲ್ಲಿ 3,400ಕ್ಕೆ ಏರಿಕೆ: ಆರ್‌ಟಿಐ

Update: 2023-01-27 23:16 IST

ಹೊಸದಿಲ್ಲಿ, ಜ. 27: ಕೇಂದ್ರ ಸರಕಾರ ಟ್ವಿಟರ್(Twitter) ಯುಆರ್‌ಎಲ್‌ಗಳನ್ನು ನಿರ್ಬಂಧಿಸಲು 2022ರಲ್ಲಿ 3,417ಕ್ಕೂ ಅಧಿಕ ಆದೇಶ ಹೊರಡಿಸಿತ್ತು. ಇದು ನರೇಂದ್ರ ಮೋದಿ(Narendra Modi) ಸರಕಾರ 2014ರಲ್ಲಿ ಅಸ್ತಿತ್ವಕ್ಕೆ ಬರುವ ಸಂದರ್ಭ ಕೇವಲ 8 ಇತ್ತು ಎಂದು ಆರ್‌ಟಿಐ ಮನವಿ ಮೂಲಕ ಲಭ್ಯವಾದ ದತ್ತಾಂಶ ಬಹಿರಂಗಪಡಿಸಿದೆ.

ಈ ಪ್ರವೃತ್ತಿಯು ಅಂತಹ ವೇದಿಕೆಯ ದುರುಪಯೋಗದ ಹೆಚ್ಚಳವನ್ನು ಅಥವಾ ತನ್ನ ಸ್ವಂತ ಚಿಂತನೆಗೆ ಹೊಂದಿಕೆಯಾಗದ ನಿಲುವು ಹಾಗೂ ಅಭಿಪ್ರಾಯಗಳ ಕುರಿತು ಕೇಂದ್ರ ಸರಕಾರದ ಅಸಹನೆ ಅಥವಾ ಅದೆರಡನ್ನೂ ಸೂಚಿಸುತ್ತದೆ ಎಂದು ದತ್ತಾಂಶ ಸ್ವೀಕರಿಸಿರುವ ಆರ್ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ (Venkatesh Nayak)ಅವರು ಹೇಳಿದ್ದಾರೆ.

ಈ ಹಿಂದೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಾಮಾಜಿಕ ಹಾಗೂ ಜಿಡಿಟಲ್ ಮಾಧ್ಯಮ ವೇದಿಕೆಗಳಲ್ಲಿ ಅಂಶಗಳನ್ನು ನಿರ್ಬಂಧಿಸುವ ಕುರಿತು ನಿರ್ದೇಶನ ನೀಡಿದ ಅಂತರ್ ಇಲಾಖೆಯ ಪ್ರಕ್ರಿಯೆಗಳನ್ನು ಪ್ರಕಟಿಸುವಂತೆ ಕೋರಿದ ಮನವಿಯನ್ನು ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (CPIO) ತಿರಸ್ಕರಿಸಿದ್ದರು.

ಸಿಪಿಐಒ ಪರಿಶೀಲನಾ ಸಮಿತಿಯ ಪ್ರಕ್ರಿಯೆಗಳನ್ನು ‘ಗೌಪ್ಯ’ ಎಂದು ಹೇಳಿತು. ಅಲ್ಲದೆ, ಆರ್‌ಟಿಐ ಕಾಯ್ದೆ ಅಡಿಯಲ್ಲಿ ಅದನ್ನು ಪ್ರಕಟಿಸುವ ಮನವಿಯನ್ನು ತಿರಸ್ಕರಿಸಿತ್ತು. ಆದರೂ ಅದಾದ 40 ದಿನಗಳ ಬಳಿಕ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನದ ಸಿಪಿಐಒ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು.

Similar News