ಉಡುಪಿ: ಇಲೆಕ್ಟ್ರಾನಿಕ್ಸ್ ಗಿಫ್ಟ್ ಬಂದಿರುವುದಾಗಿ ನಂಬಿಸಿ ಸಾವಿರಾರು ರೂ. ವಂಚನೆ

Update: 2023-01-28 14:45 GMT

ಉಡುಪಿ: ಇಲೆಕ್ಟ್ರಾನಿಕ್ಸ್ ಗಿಫ್ಟ್ ಬಂದಿರುವುದಾಗಿ ನಂಬಿಸಿ ಸಾವಿರಾರು ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದೀಚ್ಚಾ ಪರೇಶ್ ಕಾಮತ್ ಎಂಬವರಿಗೆ ಅಪರಿಚಿತರು ಕರೆ ಮಾಡಿ ನಿಮಗೆ ಎಲೆಕ್ಟ್ರಾನಿಕ್ಸ್ ಸಾಮಾಗ್ರಿ ಗಿಫ್ಟ್ ಬಂದಿದೆ ಎಂದು ತಿಳಿಸಿದ್ದರು.

ಗಿಫ್ಟ್‌ನ್ನು ಕಳುಹಿಸಲು ಅಪರಿಚಿತ ನೀಡಿದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ತಿಳಿಸಿದ್ದನು. ಅದರಂತೆ ಪರೇಶ್ ಕಾಮತ್ ಹಂತ ಹಂತವಾಗಿ ಒಟ್ಟು 33,998ರೂ. ಹಣವನ್ನು ಪಾವತಿಸಿದ್ದರು. ಆದರೆ ಅಪರಿಚಿತ ಇವರಿಗೆ ಗಿಫ್ಟ್ ನೀಡದೆ, ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ದೂರಲಾಗಿದೆ.

Similar News