ಉತ್ತರಪ್ರದೇಶ: ಅಂಬೇಡ್ಕರ್ ಪ್ರತಿಮೆಗೆ ಹಾನಿ ಮಾಡಿದ ವ್ಯಕ್ತಿಯ ಬಂಧನ
Update: 2023-01-28 22:08 IST
ಬಲಿಯಾ,ಜ.28: ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಚೌಬೆ ಛಪರಾ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್(Dr. B. R. Ambedkar) ಅವರ ಪ್ರತಿಮೆಗೆ ಹಾನಿಯನ್ನುಂಟು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ರಾತ್ರಿ ಘಟನೆ ಸಂಭವಿಸಿದ್ದು,ಶನಿವಾರ ಬೆಳಿಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿ ಚಂದ್ರಶೇಖರ ಸಿಂಗ್(Chandra Shekhar) ಎಂಬಾತನನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ದುರ್ಗಾಪ್ರಸಾದ ತಿವಾರಿ(Durga prasad tiwari) ತಿಳಿಸಿದರು.
ರೇವತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಂತೆ ಆರೋಪಿಯು ಪ್ರತಿಮೆಯ ಕೈಗೆ ಹಾನಿಯನ್ನುಂಟು ಮಾಡಿದ್ದ. ಅದನ್ನೀಗ ಸರಿಪಡಿಸಲಾಗಿದೆ. ಗ್ರಾಮದಲ್ಲಿ ಸ್ಥಿತಿ ಶಾಂತಿಯುತವಾಗಿದೆ ಎಂದರು.