ಶಾರುಖ್‌ ಅವತಾರದಲ್ಲಿ ಮಿಂಚಿದ ವಾರ್ನರ್:‌ ಆಸಿಸ್‌ ಕ್ರಿಕೆಟಿಗನ ಪಠಾಣ್‌ ಪ್ರೇಮಕ್ಕೆ ಅಭಿಮಾನಿಗಳು ಫಿದಾ

Update: 2023-01-30 16:14 GMT

ಸಿಡ್ನಿ: ಜನವರಿ 25ರಂದು ವಿಶ್ವಾದ್ಯಂತ ಬಿಡುಗಡೆಯಾದ ಶಾರುಖ್ ಖಾನ್(Shah Rukh Khan) ಮುಖ್ಯಭೂಮಿಕೆಯಲ್ಲಿರುವ 'ಪಠಾಣ್'(Pathan) ಚಿತ್ರವು ಐದೇ ದಿನದಲ್ಲಿ 500ಕ್ಕೂ ಅಧಿಕ ಕೋಟಿಗಳನ್ನು ಸಂಪಾದಿಸಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಐದು ವರ್ಷಗಳ ಬಳಿಕ ಭಾರೀ ಸದ್ದಿನೊಂದಿಗೆ ಕಮ್‌ ಬ್ಯಾಕ್‌ ಮಾಡಿರುವ ಶಾರುಖ್‌ಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಲಭಿಸುತ್ತಿದೆ. ಸಾಮಾನ್ಯರಷ್ಟೇ ಅಲ್ಲದೆ ಪ್ರಖ್ಯಾತ ತಾರೆಯರೂ ಶಾರುಖ್‌ ಕಮ್‌ಬ್ಯಾಕ್‌ ಗೆ ಅವರದೇ ಆದ ರೀತಿಯಲ್ಲಿ ಸ್ವಾಗತ ಕೋರಿದ್ದಾರೆ. ಆ ಸಾಲಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ ಕೂಡಾ ಸೇರಿದ್ದಾರೆ!.

ಭಾರತದಲ್ಲಿ ಹಲವಾರು ಅಭಿಮಾನಿಗಳನ್ನು ಹೊಂದಿರುವ ಡೇವಿಡ್ ವಾರ್ನರ್ ಭಾರತೀಯ ಹಾಡುಗಳು ಹಾಗೂ ಚಿತ್ರಗಳ ದೃಶ್ಯಗಳಿಗೆ ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಹು ಜನಪ್ರಿಯರಾಗಿದ್ದಾರೆ, ಅವರೀಗ ಶಾರುಖ್‌ ಅವತಾರದಲ್ಲಿ ಕಾಣಿಸಿಕೊಂಡು ಪಠಾಣ್ ಚಿತ್ರಕ್ಕೆ ಗೌರವ ಸಲ್ಲಿಸಿದ್ದಾರೆ. 

ಈ ವಿಡಿಯೊವನ್ನು ಇದುವರೆಗೂ ಸರಿ ಸುಮಾರು 8 ಲಕ್ಷ ಇನ್ಸ್ಟಾಗ್ರಾಮ್‌ ಬಳಕೆದಾರರು ಮೆಚ್ಚಿಕೊಂಡಿದ್ದಾರೆ‌. ಭಾರತೀಯ ಬೌಲರ್ ಖಲೀಲ್ ಅಹಮದ್ ಕೂಡಾ ಈ ವಿಡಿಯೊವನ್ನು ಮೆಚ್ಚಿಕೊಂಡಿದ್ದು, ವಾರ್ನರ್ ಪ್ರಯತ್ನವನ್ನು ಪ್ರಶಂಸಿಸಿದ್ದಾರೆ.  

ಶಾರುಖ್‌ ಅಭಿಮಾನಿಗಳು ವಾರ್ನರ್‌ ಪ್ರಯತ್ನವನ್ನು ಕೊಂಡಾಡಿದ್ದಾರೆ.

Similar News