ರಾಜಭವನದ ಬಳಿಕ ದಿಲ್ಲಿ ವಿವಿಯ ಮುಘಲ್ ಗಾರ್ಡನ್ ಹೆಸರೂ ಬದಲಾವಣೆ.!

Update: 2023-01-30 18:33 GMT

ಹೊಸದಿಲ್ಲಿ, ಜ.30: ದಿಲ್ಲಿ ವಿವಿಯ (Delhi University) ಉತ್ತರ ಕ್ಯಾಂಪಸ್‌ನಲ್ಲಿರುವ ಮುಘಲ್ ಗಾರ್ಡನ್‌ಗೆ (Mughal Garden) ‘ಗೌತಮ ಬುದ್ಧ ಶತಾಬ್ದಿ ಉದ್ಯಾನವನ’ (Gautam Buddha Centenary) ಎಂದು ಮರುನಾಮಕರಣ ಮಾಡಲಾಗಿದೆ ಎಂದು ಅಧಿಕಾರಿಯೋರ್ವರು ಸೋಮವಾರ ತಿಳಿಸಿದರು. ವಿವಿಯ ಪ್ರಕಾರ ಉದ್ಯಾನವನವು ಮುಘಲ್ ವಿನ್ಯಾಸವನ್ನು ಹೊಂದಿರಲಿಲ್ಲ, ಹೀಗಾಗಿ ಜ.27ರಂದು ಮರುನಾಮಕರಣ ಮಾಡಲಾಗಿದೆ.

ರಾಷ್ಟ್ರಪತಿ ಭವನವೂ ಶನಿವಾರ ತನ್ನ ಪ್ರಸಿದ್ಧ ಮುಘಲ್ ಗಾರ್ಡನ್ ಅನ್ನು ‘ಅಮೃತ ಉದ್ಯಾನ ’ಎಂದು ಮರುನಾಮಕರಣಗೊಳಿಸಿತ್ತು.  

ಎರಡೂ ಉದ್ಯಾನಗಳ ಮರುನಾಮಕರಣ ಒಂದೇ ಸಮಯದಲ್ಲಿ ನಡೆದಿರುವುದು ಕಾಕತಾಳೀಯವಾಗಿದೆ ಎಂದು ಹೇಳಿದ ವಿವಿಯ ಅಧಿಕಾರಿಯೋರ್ವರು, ವಿವಿಯು ತನ್ನ ಉದ್ಯಾನವನ ಸಮಿತಿಯೊಂದಿಗೆ ಸುದೀರ್ಘ ಚರ್ಚೆಗಳ ಬಳಿಕ ಹೆಸರು ಬದಲಿಸುವ ನಿರ್ಧಾರಕ್ಕೆ ಬಂದಿತ್ತು ಎಂದರು.

ಉದ್ಯಾನವನದಲ್ಲಿ ಕಳೆದ 15 ವರ್ಷಗಳಿಂದಲೂ ಗೌತಮ ಬುದ್ಧನ ಪ್ರತಿಮೆಯಿದೆ. ಈ ಉದ್ಯಾನವನವನ್ನು ಮುಘಲರು ನಿರ್ಮಿಸಿರಲಿಲ್ಲ, ಅದು ಮುಘಲ್ ವಿನ್ಯಾಸವನ್ನೂ ಹೊಂದಿಲ್ಲ ಎಂದು ಅಧಿಕಾರಿ ತಿಳಿಸಿದರು.

Similar News