ಮಂಗಳೂರು: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ; ಯುವಕನ ವಿರುದ್ಧ ದೂರು ದಾಖಲು

Update: 2023-01-30 18:21 GMT

ಮಂಗಳೂರು: ಯುವಕನೊಬ್ಬ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಂಕನಾಡಿ ನಗರ ಠಾಣೆಯ ವಿನ್ಸೆಂಟ್ ಅಶೋಕ್ ಲೋಬೋ ಪೊಲೀಸ್ ಕಾನ್‌ಸ್ಟೇಬಲ್ ದಿನೇಶ್ ರಾಠೋಡ್ ಜೊತೆ ಜ.29ರಂದು ನಗರದ ಮರೋಳಿ ಸೂರ್ಯನಾರಾಯಣ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಬಂದೋಬಸ್ತ್ ಕರ್ತವ್ಯದಲ್ಲಿರುವಾಗ ರಾತ್ರಿ 9:30ಕ್ಕೆ ಆರೋಪಿ ಅಚಲ್ ವಿ.ಸಿ. ಎಂಬಾತ ತನ್ನ ಸ್ಕೂಟರನ್ನು ದೇವಸ್ಥಾನದ ಬಳಿಯ ಸಾರ್ವಜನಿಕ ರಸ್ತೆಯ ಬದಿಯಲ್ಲಿ  ಸಾರ್ವಜನಿರು  ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ  ನಿಲ್ಲಿಸಿದ್ದ ಎನ್ನಲಾಗಿದೆ.

ಆವಾಗ ವಿನ್ಸೆಂಟ್ ಅಶೋಕ್ ಲೋಬೋ ಸ್ಕೂಟರ್ ಹೀಗೆ ನಿಲ್ಲಿಸಿದರೆ ಜಾತ್ರೋತ್ಸವ್ಕಕೆ ಬರುವ ಸಾರ್ವಜನಿಕರಿಗೆ ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತಿದೆ. ಸ್ವಲ್ಪ ಮುಂದೆ ಹೋಗಿ ವಾಹನವನ್ನು ನಿಲ್ಲಿಸುವಂತೆ ಹೇಳಿದರೂ ಕೇಳದೆ ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸದಂತೆ ಹೇಳಲು ನೀನು ಯಾರು? ನಿನಗೆ ಎಷ್ಟು ಕೆಲಸವಿದೆ ಅದನ್ನು ನೀನು ಮಾಡು. ನಾನು ಸ್ಕೂಟರ್ ತೆಗೆಯುವುದೇ ಇಲ್ಲ. ನೀನು ಏನು ಮಾಡುತ್ತಿಯೋ, ಅದನ್ನು ಮಾಡು ಎಂದು ಏರು ಧ್ವನಿಯಲ್ಲಿ ಹೇಳಿ, ಕೀಯನ್ನು ಸ್ಕೂಟರ್‌ನಲ್ಲಿಯೇ ಬಿಟ್ಟು ಹೋದಾಗ ತಾನು ಸ್ಕೂಟರನ್ನು ಸ್ವಲ್ಪಮುಂದೆ ಹೋಗಿಟ್ಟಾಗ, ಆರೋಪಿಯು ಸಮವಸ್ತ್ರದ ಧರಿಸಿದ್ದ ತನ್ನ ಭುಜದ ಪಟ್ಟಿಯನ್ನು ಹಿಡಿದು ಎಳೆದು ಕರ್ತವ್ಯಕ್ಕೆ ಅಡ್ಡಿಪಡಿಸಿ ಎಡ ಕೆನ್ನೆಗೆ, ಎಡ ಕುತ್ತಿಗೆ, ಎದೆಯ ಎಡಭಾಗಕ್ಕೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Similar News