ಟೆಕ್ಸಾಸ್ ನಲ್ಲಿ ಶೂಟೌಟ್: ವಿದ್ಯಾರ್ಥಿ ಮೃತ್ಯು; 4 ಮಂದಿಗೆ ಗಾಯ

Update: 2023-01-31 14:31 GMT

ವಾಷಿಂಗ್ಟನ್, ಜ.31: ಅಮೆರಿಕದ ಟೆಕ್ಸಾಸ್ ನಲ್ಲಿನ ಪ್ರವಾಸೀ ತಾಣವೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹೈಸ್ಕೂಲ್ ವಿದ್ಯಾರ್ಥಿ ಮೃತಪಟ್ಟಿದ್ದು ಇತರ 4 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪ್ರವಾಸೀ ತಾಣ ಆಸ್ಟಿನ್ ನ ವಿಶ್ರಾಂತಿ ಗ್ರಹಕ್ಕೆ ನುಗ್ಗಿದ ಬಂದೂಕುಧಾರಿಯೊಬ್ಬ ಅಲ್ಲಿದ್ದವರ ಮೇಲೆ ಗುಂಡು ಹಾರಿಸಿದಾಗ 17 ವರ್ಷದ ವಿದ್ಯಾರ್ಥಿ ಬ್ರೇಡನ್ ಬೊಲ್ಯಾರ್ಡ್ ಎಂಬಾತ ಮೃತಪಟ್ಟಿದ್ದು ಇತರ 4 ಮಂದಿ ಗಾಯಗೊಂಡಿದ್ದಾರೆ.

ಗುಂಡಿನ ದಾಳಿ ನಡೆಸಿದ ದುಷ್ಕರ್ಮಿ ಅಲ್ಲಿಂದ ಪರಾರಿಯಾಗಿದ್ದು  ಸ್ಥಳದಲ್ಲಿದ್ದ ಸಿಸಿ ಟಿವಿಯ ವೀಡಿಯೊದಲ್ಲಿ ಶಂಕಿತ ಆರೋಪಿಯನ್ನು ಗುರುತಿಸಲಾಗಿದ್ದು ಈತ ಕ್ರಿಮಿನಲ್ ಹಿನ್ನಲೆಯವನಾಗಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Similar News