ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಮುಹಮ್ಮದ್ ಗೌಸ್

Update: 2023-02-01 07:54 GMT

ಕಾರ್ಕಳ, ಫೆ.1: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಮುಹಮ್ಮದ್ ಗೌಸ್ ಮಿಯ್ಯಾರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ನಾಸಿರ್ ಶೇಖ್ ಬೈಲೂರು, ಕಾರ್ಯದರ್ಶಿಯಾಗಿ ಮಮ್ತಾಝ್ ಹಸನ್, ಜತೆ ಕಾರ್ಯದರ್ಶಿಯಾಗಿ ಶಾಕಿರ್ ಹುಸೇನ್ , ಕೋಶಾಧಿಕಾರಿಯಾಗಿ ಸಯ್ಯದ್ ಹಸನ್ ಗಾಂಧಿ ಮೈದಾನ್ ಆಯ್ಕೆಯಾಗಿದ್ದಾರೆ.

ಜಿಲ್ಲಾ ಸಮಿತಿಯ ಸದಸ್ಯರಾಗಿ ಮುಹಮ್ಮದ್ ಶರೀಫ್ ಬಂಗ್ಲೆಗುಡ್ಡೆ, ಅಶ್ಫಾಕ್ ಅಹ್ಮದ್, ಸಮದ್ ಖಾನ್, ನಾಸಿರ್ ಶೇಖ್, ಮುಹಮ್ಮದ್ ಗೌಸ್ ಆಯ್ಕೆಯಾಗಿದ್ದಾರೆ.

ಸದಸ್ಯರುಗಳಾಗಿ ಅಬ್ದುಲ್ಲಾ ಆದಂ ಪುಲ್ಕೇರಿ, ಅಬ್ದುರ್ರಶೀದ್, ಸಯ್ಯದ್ ಅಬ್ಬಾಸ್ ಅಂಚಿಕಟ್ಟೆ, ಎನ್.ಸಿ.ರಹೀಂ ಈದು, ಜಾವೇದ್ ಸಾಹೇಬ್ ಹೊಸ್ಮಾರು, ಎಚ್.ಸುಲೈಮಾನ್ ಬಜಗೋಳಿ, ಎನ್.ಎಚ್.ಹಮೀದ್ ನಿಟ್ಟೆ ಆಯ್ಕೆಯಾಗಿದ್ದಾರೆ.

ನಾಮನಿರ್ದೇಶಿತ ಸದಸ್ಯರಾಗಿ ಪಿ.ಎ.ರಹೀಂ ಎಣ್ಣೆಹೊಳೆ, ಅಬ್ದುಲ್ ಮಜೀದ್(ಮುನೀರ್) ತೆಳ್ಳಾರ್, ಮಯ್ಯದ್ದಿ ರೆಂಜಾಳ, ಅಬ್ದುಲ್ಲತೀಫ್ ಸಾಣೂರು, ಆಸಿಫ್ ಅಜೆಕಾರ್ ಅವರನ್ನು ಆಯ್ಕೆ ಮಾಡಲಾಯಿತು. ತಾಲೂಕು ಉಸ್ತುವಾರಿಯಾಗಿ ಅಶ್ಫಾಕ್ ಅಹ್ಮದ್ ರನ್ನು ನೇಮಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.

Similar News