ಕೇಂದ್ರ ಬಜೆಟ್ 2023: ಜನಗಣತಿ 2021ಕ್ಕೆ 1,564 ಕೋ.ರೂ.ಮೀಸಲು

Update: 2023-02-01 15:43 GMT

ಹೊಸದಿಲ್ಲಿ,ಫೆ.1: ಕೋವಿಡ್ ಸಾಂಕ್ರಾಮಿಕದಿಂದಾಗಿ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಜನಗಣತಿ 2021 ಮತ್ತು ಸಂಬಂಧಿತ ಚಟುವಟಿಕೆಗಳಿಗಾಗಿ 2023-24ನೇ ಸಾಲಿನ ಮುಂಗಡಪತ್ರದಲ್ಲಿ1,564 ಕೋ.ರೂ.ಗಳನ್ನು ಮೀಸಲಿಡಲಾಗಿದೆ.

ಇದು ಕಳೆದ ವರ್ಷದ ಬಜೆಟ್ ಗೆ ಹೋಲಿಸಿದರೆ ಅರ್ಧಕ್ಕೂ ಕಡಿಮೆಯಾಗಿದೆ. ಜನಗಣತಿ ಕಾರ್ಯಕ್ಕಾಗಿ ಕಳೆದ ವರ್ಷದ ಬಜೆಟ್ ಅಂದಾಜು 3,676 ಕೋ.ರೂ.ಆಗಿತ್ತು,ಆದರೆ ಅದನ್ನು ಬಳಿಕ 552.65 ಕೋ.ರೂ.ಗಳಿಗೆ ಪರಿಷ್ಕರಿಸಲಾಗಿತ್ತು. ಮೊತ್ತವು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಮುಂಡಪತ್ರದಲ್ಲಿ ಹಂಚಿಕೆ ಮಾಡಲಾಗಿರುವ 1.96 ಲ.ಕೋ.ರೂ.ಗಳ ಭಾಗವಾಗಿದೆ.

ಪ್ರತಿ ಹತ್ತು ವರ್ಷಗಳಿಗೆ ನಡೆಯುವ ಜನಗಣತಿಯು ಕೋವಿಡ್ ಸಾಂಕ್ರಾಮಿಕದಿಂದಾಗಿ ವಿಳಂಬಗೊಂಡಿದೆ ಎಂದು ಕೇಂದ್ರವು ಪದೇ ಪದೇ ತಿಳಿಸಿದೆ. ಈ ಹಿಂದೆ ಜನಗಣತಿ ಪ್ರಕ್ರಿಯೆಯನ್ನು 2020,ಡಿ.31ರಿಂದ 2021,ಡಿ.21ಕ್ಕೆ ಮತ್ತು ನಂತರ 2022 ಡಿಸೆಂಬರ್ವರೆಗೆ ಎರಡು ಸಲ ತಲಾ ಆರು ತಿಂಗಳಿಗೆ ವಿಸ್ತರಿಸಲಾಗಿತ್ತು.

Similar News