ಅಗ್ನಿವೀರರಿಗೆ ತೆರಿಗೆ ಹೊರೆ ಇಳಿಸಲು ಕ್ರಮ

Update: 2023-02-01 17:43 GMT

ಹೊಸದಿಲ್ಲಿ,ಫೆ.1: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಮುಂಗಡಪತ್ರದಲ್ಲಿ ‘ಅಗ್ನಿಪಥ’ಯೋಜನೆಯಡಿ ಸಶಸ್ತ್ರ ಪಡೆಗಳಿಗೆ ನೇಮಕಗೊಂಡಿರುವ ಅಗ್ನಿವೀರ ’ರಿಗೆ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಪ್ರಕಟಿಸಿದರು.

ಸಶಸ್ತ್ರ ಪಡೆಗಳಲ್ಲಿ ಅಲ್ಪಾವಧಿಯ ನೇಮಕಕ್ಕಾಗಿ ಅಗ್ನಿಪಥ ಯೋಜನೆಗೆ ಕೇಂದ್ರವು ಕಳೆದ ವರ್ಷ ಚಾಲನೆ ನೀಡಿತ್ತು.
ಅಗ್ನಿವೀರ ಮೂಲನಿಧಿಯಿಂದ ಅಗ್ನಿವೀರರು ಸ್ವೀಕರಿಸುವ ಹಣವು ತೆರಿಗೆಗಳಿಂದ ವಿನಾಯಿತಿಯನ್ನು ಹೊಂದಿರುತ್ತದೆ ಎಂದು ತನ್ನ ಭಾಷಣದಲ್ಲಿ ಹೇಳಿದ ಸೀತಾರಾಮನ್,ತಮ್ಮ ಸೇವಾ ನಿಧಿ ಖಾತೆಗೆ ಅಗ್ನಿವೀರರು ಅಥವಾ ಸರಕಾರವು ಸಲ್ಲಿಸುವ ದೇಣಿಗೆಗಳ ಮೇಲೆ ಒಟ್ಟು ಆದಾಯದ ಲೆಕ್ಕಾಚಾರದಲ್ಲಿ ಕಡಿತಕ್ಕೆ ಅವಕಾಶ ನೀಡಲು ಪ್ರಸ್ತಾವಿಸಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿಯ ಲಕ್ಷಾಂತರ ಯುವಜನರ ಕೌಶಲ್ಯಾಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ 4.0 ಸೇರಿದಂತೆ ಇತರ ಯೋಜನೆಗಳನ್ನೂ ಸೀತಾರಾಮನ್ ಯುವಜನರಿಗಾಗಿ ಪ್ರಕಟಿಸಿದರು.

Similar News