ವಿತ್ತೀಯ ಕೊರತೆ ಗುರಿ ಜಿಡಿಪಿಯ ಶೇ.5.9ಕ್ಕೆ ನಿಗದಿ

Update: 2023-02-01 18:06 GMT

ಹೊಸದಿಲ್ಲಿ,ಫೆ.1: ಕೇಂದ್ರವು 2023-24ನೇ ಹಣಕಾಸು ವರ್ಷಕ್ಕಾಗಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.5.9ಕ್ಕೆ ನಿಗದಿಗೊಳಿಸಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಸಂಸತ್ತಿನಲ್ಲಿ ತನ್ನ ಬಜೆಟ್ ಭಾಷಣದಲ್ಲಿ ತಿಳಿಸಿದರು. ಹಾಲಿ 2022-23ನೇ ಹಣಕಾಸು ವರ್ಷಕ್ಕಾಗಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.6.4ರಲ್ಲಿ ಉಳಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.

ಸರಕಾರದ ವಿತ್ತೀಯ ಕೊರತೆಯು ಅದರ ಆದಾಯಗಳು ಮತ್ತು ಖರ್ಚುಗಳ ನಡುವಿನ ಅಂತರವಾಗಿದೆ.

2023-24ರಲ್ಲಿ ಸರಕಾರದ ಒಟ್ಟು ಸ್ವೀಕೃತಿಗಳು ಸಾಲಗಳನ್ನು ಹೊರತುಪಡಿಸಿ 27.2 ಲ.ಕೋ.ರೂ.ಗಳಾಗಲಿವೆ ಮತ್ತು ವೆಚ್ಚ 45 ಲ.ಕೋ.ರೂ.ಗಳಾಗಲಿವೆ ಎಂದು ತಿಳಿಸಿದ ಸೀತಾರಾಮನ್, ವಿತ್ತೀಯ ಬಲವರ್ಧನೆಯನ್ನು ಖಚಿತಪಡಿಸಲು 2025-26ರ ವೇಳೆಗೆ ವಿತ್ತೀಯ ಕೊರತೆಯನ್ನು ಜಿಡಿಪಿ ಶೇ.4.5ರ ಕೆಳಗೆ ತರುವುದು ಸರಕಾರದ ಗುರಿಯಾಗಲಿದೆ ಎಂದು ಹೇಳಿದರು.

ಮುಂದಿನ ಹಣಕಾಸು ವರ್ಷದಲ್ಲಿ ತೆರಿಗೆ ಸ್ವೀಕೃತಿಗಳನ್ನು 23.3 ಲ.ಕೋ.ರೂ.ಗಳಿಗೆ ನಿಗದಿ ಪಡಿಸಲಾಗಿದೆ ಮತ್ತು ರಾಜ್ಯಗಳು ಜಿಡಿಪಿಯ ಶೇ.3.5ರಷ್ಟು ವಿತ್ತೀಯ ಕೊರತೆಯನ್ನು ಹೊಂದಿರಲು ಅವಕಾಶ ನೀಡಲಾಗುವುದು. 2023-24ರಲ್ಲಿ ವಿತ್ತೀಯ ಕೊರತೆಗೆ ಹಣಕಾಸು ಒದಗಿಸಲು ದಿನಾಂಕಗಳನ್ನು ಹೊಂದಿರುವ ಸಾಲಪತ್ರಗಳ ಮೂಲಕ ನಿವ್ವಳ ಮಾರುಕಟ್ಟೆ ಸಾಲಗಳನ್ನು 11.8 ಲ.ಕೋ.ರೂ.ಗಳೆಂದು ಅಂದಾಜಿಸಲಾಗಿದೆ ಎಂದು ವಿತ್ತಸಚಿವೆ ತಿಳಿಸಿದರು.

Similar News