ಎರಡು ವರ್ಷ ಜೈಲುವಾಸ ಬಳಿಕ ಸಿದ್ದೀಕ್‌ ಕಪ್ಪನ್‌ ಇಂದು ಬಿಡುಗಡೆ

Update: 2023-02-02 04:32 GMT

ಲಕ್ನೋ: ಇಲಿನ ಸೆಷನ್ಸ್ ನ್ಯಾಯಾಲಯ ಬುಧವಾರ ಕೇರಳ ಮೂಲದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಅವರನ್ನು ಲಕ್ನೋ ಜೈಲಿನಿಂದ ಬಿಡುಗಡೆ ಮಾಡುವ ಸಂಬಂಧ ಜಾಮೀನು ಆದೇಶಕ್ಕೆ ಸಹಿ ಮಾಡಿದೆ.

ಕಾನೂನು ಜಾರಿ ನಿರ್ದೇಶನಾಲಯ ನೀಡಿದ ದೂರಿನ ಹಿನ್ನೆಲೆಯಲ್ಲಿ ಪಿಎಂಎಲ್‌ಎ ಕಾಯ್ದೆಯಡಿ ಕಪ್ಪನ್ ಅವರನ್ನು 2020ರ ಅಕ್ಟೋಬರ್‌ನಲ್ಲಿ ಬಂಧಿಸಿಲಾಗಿತ್ತು. ಎರಡು ವರ್ಷಗಳಿಗೂ ಅಧಿಕ ಕಾಲ ಜೈಲುವಾಸ ಅನುಭವಿಸಿದ ಕಪ್ಪನ್ ಗುರುವಾರ ಮುಂಜಾನೆ ಸೆರೆಮನೆಯಿಂದ ಬಿಡುಗಡೆಯಾಗಲಿದ್ದಾರೆ.

"ಸೆಷನ್ಸ್ ನ್ಯಾಯಾಲಯ ಸಿದ್ದೀಕ್‌ ಕಪ್ಪನ್‌ ಅವರ ಬಿಡುಗಡೆ ಆದೇಶಕ್ಕೆ ಸಹಿ ಮಾಡಿದೆ. ವರನ್ನು ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಲಾಗುತ್ತದೆ" ಎಂದು ಸಿದ್ದೀಕ್‌ ಅವರ ವಕೀಲ ಇಷಾನ್ ಬಘೇಲ್ ಸ್ಪಷ್ಟಪಡಿಸಿದ್ದಾರೆ.

ಇತರ ಯಾವುದೇ ಪ್ರಕರಣಗಳಲ್ಲಿ ಕಪ್ಪನ್ ಬೇಕಿಲ್ಲವಾದ ಪಕ್ಷದಲ್ಲಿ ಕಪ್ಪನ್ ಅವರನ್ನು ಬಿಡುಗಡೆ ಮಾಡುವಂತೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಂಜಯ್ ಶಂಕರ್ ಪಾಂಡೆ, ಲಕ್ನೋ ಜೈಲು ಅಧೀಕ್ಷರಿಗೆ ಸೂಚನೆ ನಿಡಿದ್ದಾರೆ. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ 2022ರ ಡಿಸೆಂಬರ್ 23ರಂದು ಪಿಎಂಎಲ್‌ಎ ಪ್ರಕರಣದಲ್ಲಿ ಕಪ್ಪನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

Similar News