ತಡವಾಗಿಯಾದರೂ ನ್ಯಾಯ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ: ಸಿದ್ದೀಕ್ ಕಪ್ಪನ್ ಪತ್ನಿ ಪ್ರತಿಕ್ರಿಯೆ

Update: 2023-02-02 10:02 GMT

ಲಕ್ನೋ: ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ  20 ವರ್ಷದ ದಲಿತ ಯುವತಿಯ ಮೇಲೆ  ಸಾಮೂಹಿಕ ಅತ್ಯಾಚಾರ ಹಾಗೂ  ಸಾವಿನ ಬಗ್ಗೆ ವರದಿ ಮಾಡಲು ಉತ್ತರ ಪ್ರದೇಶದ ಹತ್ರಾಸ್‌ಗೆ ಹೋಗುತ್ತಿದ್ದಾಗ 2020ರ ಅಕ್ಟೋಬರ್ ನಲ್ಲಿ ಬಂಧಿಸಲ್ಪಟ್ಟು ಕಳೆದ 2 ವರ್ಷಕ್ಕೂ ಅಧಿಕ ಸಮಯದಿಂದ ಜೈಲುವಾಸದಲ್ಲಿದ್ದ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್  ಗುರುವಾರ ಬೆಳಗ್ಗೆ ಬಿಡುಗಡೆಯಾಗಿ ತನ್ನ ಕುಟುಂಬವನ್ನು ಸೇರಿಕೊಂಡರು.

"ನಾನು ದಿಲ್ಲಿ ಗೆ ಬರುತ್ತಿದ್ದೇನೆ. ನಾನು ಆರು ವಾರಗಳ ಕಾಲ ಅಲ್ಲಿಯೇ ಇರಬೇಕು" ಎಂದು ಕಪ್ಪನ್ ಪಿಟಿಐಗೆ ತಿಳಿಸಿದರು.

ಜೈಲಿನಲ್ಲಿ ಜೀವನ ಹೇಗಿತ್ತು ಎಂದು ಕೇಳಿದಾಗ ಹೆಚ್ಚಿಗೆ ಏನನ್ನೂ ಹೇಳದೆ "ನಾನು ಹೆಚ್ಚು ಕಷ್ಟಪಟ್ಟೆ" ಎಂದರು.

ಜೈಲಿನಲ್ಲಿದ್ದ ಎರಡೂವರೆ ವರ್ಷಗಳ ಅವಧಿಯಲ್ಲಿ ಕಪ್ಪನ್  ಅವರ ತಾಯಿ ತೀರಿಕೊಂಡಿದ್ದರು.

“ತನ್ನ ಮಗ  ಮನೆಗೆ ಬರುವುದನ್ನು ನೋಡಲು ಅವರ ತಾಯಿಯೇ ಇಲ್ಲ. ಯುಎಪಿಎ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದು, ಅವರು ನಿರಪರಾಧಿ ಎಂಬುದು ಬಹಿರಂಗವಾಗಿದೆ. ಎರಡೂವರೆ ವರ್ಷಗಳು ಕಡಿಮೆ ಸಮಯವಲ್ಲ. ನಾವು ಸಾಕಷ್ಟು ನೋವು ಹಾಗೂ  ಸಂಕಟಗಳನ್ನು ಅನುಭವಿಸಿದ್ದೇವೆ. ಆದರೆ ತಡವಾಗಿಯಾದರೂ ನ್ಯಾಯ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ ," ಎಂದು ಕಪ್ಪನ್ ಪತ್ನಿ ರೆಹಾನಾ ಪಿಟಿಐಗೆ ತಿಳಿಸಿದರು.

ಜಾಮೀನು ಪಡೆದ ವಾರಗಳ ನಂತರ ಕೇರಳದ ಪತ್ರಕರ್ತ ಕಪ್ಪನ್ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ

ಕಪ್ಪನ್ ದಂಪತಿಗೆ ಮೂವರು ಮಕ್ಕಳಿದ್ದಾರೆ.

"ನಮ್ಮ ಮಕ್ಕಳು ತಂದೆಯವರನ್ನು ಮನೆಗೆ ಸ್ವಾಗತಿಸಲು ಕಾಯುತ್ತಿದ್ದಾರೆ. ಅವರ ಸಂತೋಷವು ದೂರವಾಗಿದೆ. ಆದರೆ  ಅವರು ತಮ್ಮ ತಂದೆಯನ್ನು ಮರೆಯಲು ಸಾಧ್ಯವಿದೆಯೇ ? ಅವರು ಪತ್ರಕರ್ತರಾದ ಸಿದ್ಧಿಕ್ ಕಪ್ಪನ್ ನಮ್ಮ  ತಂದೆ ಎಂದು ಹೇಳಲು ಅವರು ಹೆಮ್ಮೆಪಡುತ್ತಾರೆ'' ಎಂದು ಕಪ್ಪನ್ ಪತ್ನಿ ಹೇಳಿದ್ದಾರೆ.

Similar News