ಮೇಘಾಲಯ ಚುನಾವಣೆ: ಸಿಎಂ ವಿರುದ್ಧ ಮಾಜಿ ಉಗ್ರಗಾಮಿ ನಾಯಕನನ್ನು ಕಣಕ್ಕಿಳಿಸಿದ ಬಿಜೆಪಿ

Update: 2023-02-02 12:37 GMT

ಶಿಲ್ಲಾಂಗ್: ದಕ್ಷಿಣ ತುರಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ವಿರುದ್ಧ ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿಯಾಗಿ ತನ್ನ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಉಗ್ರಗಾಮಿ ನಾಯಕ ಬರ್ನಾರ್ಡ್ ಎನ್ ಮರಕ್ ಅವರನ್ನು ಗುರುವಾರ ಘೋಷಿಸಿದೆ.

ಮೇಘಾಲಯ ವಿಧಾನಸಭೆಯ ಎಲ್ಲಾ 60 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, ಗುರುವಾರ ತನ್ನ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

ಕಳೆದ ತಿಂಗಳು ಕಾನ್ರಾಡ್ ಸಂಗ್ಮಾ ನೇತೃತ್ವದ ಆಡಳಿತಾರೂಢ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್‌ನಿಂದ ಬೇರ್ಪಟ್ಟು ರಾಜ್ಯ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿತ್ತು ಎಂದು ಪಕ್ಷದ ವಕ್ತಾರರು ಇಲ್ಲಿ ತಿಳಿಸಿದ್ದಾರೆ.

ಪಟ್ಟಿಯಲ್ಲಿ ಕಾಣಿಸಿಕೊಂಡಿರುವವರಲ್ಲಿ ಬಿಜೆಪಿಯ ಇಬ್ಬರು ಹಾಲಿ ಶಾಸಕರಾದ ಸಂಬೋರ್ ಶುಲ್ಲೈ ಮತ್ತು ಎ.ಎಲ್ ಹೆಕ್ ಅವರು ನಗರದ ದಕ್ಷಿಣ ಶಿಲ್ಲಾಂಗ್ ಮತ್ತು ಪಿಂಥೋರುಖ್ರಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂದು ಅವರು ಹೇಳಿದರು.

ಕಳೆದ ಕೆಲವು ತಿಂಗಳ ಹಿಂದೆ ಬೇರೆ ಪಕ್ಷಗಳನ್ನು ತೊರೆದು ಬಿಜೆಪಿ ಸೇರಿದ ಹಾಲಿ ಶಾಸಕರಿಗೂ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇವರಲ್ಲಿ ಎಚ್‌ಎಂ ಶಾಂಗ್‌ಪ್ಲಿಯಾಂಗ್, ಫೆರ್ಲಿನ್ ಸಂಗ್ಮಾ, ಬೆನೆಡಿಕ್ಟ್ ಮರಾಕ್ ಮತ್ತು ಸ್ಯಾಮ್ಯುಯೆಲ್ ಎಂ ಸಂಗ್ಮಾ ಅವರು ಕ್ರಮವಾಗಿ ಮೌಸಿನ್‌ರಾಮ್, ಸೆಲ್ಸೆಲ್ಲಾ, ರಾಕ್ಸಾಮ್ಗ್ರೆ ಮತ್ತು ಬಾಗ್ಮಾರಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.

Similar News