ಅದಾನಿ ಗ್ರೂಪ್ ವಿರುದ್ಧದ ವಂಚನೆ ಆರೋಪದ ಕುರಿತು ಚರ್ಚೆಗೆ ಸಂಸತ್ತಿನಲ್ಲಿ ವಿಪಕ್ಷಗಳ ಪಟ್ಟು, ಸದನ ಮುಂದೂಡಿಕೆ

Update: 2023-02-03 07:21 GMT

ಹೊಸದಿಲ್ಲಿ: ಷೇರುಪೇಟೆಯಲ್ಲಿ ಕೋಲಾಹಲ ಎಬ್ಬಿಸಿದ ಅದಾನಿ ಗ್ರೂಪ್ ವಿರುದ್ಧದ ವಂಚನೆ ಆರೋಪದ ಕುರಿತು ಎರಡನೇ ದಿನವೂ ಚರ್ಚೆ ಹಾಗೂ  ತನಿಖೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದರಿಂದ  ಸಂಸತ್ತಿನ ಎರಡೂ ಸದನಗಳನ್ನು ಶುಕ್ರವಾರ ಮಧ್ಯಾಹ್ನದ ಊಟಕ್ಕೆ ಮುಂದೂಡಲಾಯಿತು.

ಸಂಸತ್ತಿನ ಉಭಯ ಸದನಗಳು ಬೇಗನೆ  ಮುಂದೂಡಲ್ಪಟ್ಟ ಒಂದು ದಿನದ ನಂತರ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ 16 ವಿರೋಧ ಪಕ್ಷಗಳ ನಾಯಕರು ಮತ್ತೊಮ್ಮೆ ಸಭೆ ನಡೆಸಿದರು. ಸಂಸದೀಯ ಸಮಿತಿ ತನಿಖೆಗೆ ಒಪ್ಪಿಸುವ ತನಕ ಕಲಾಪಕ್ಕೆ ಅಡ್ಡಿಪಡಿಸಲು ನಿರ್ಧರಿಸಲಾಯಿತು.

ಅಮೆರಿಕದ  ಶಾರ್ಟ್-ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್‌ನಿಂದ  ವಂಚನೆಯ ಆರೋಪಕ್ಕೆ ಒಳಗಾದ  ನಂತರ ಅದಾನಿ ಗ್ರೂಪ್‌ನ ಷೇರುಗಳ ಕುಸಿತದಿಂದ ಭಾರತೀಯ ಹೂಡಿಕೆದಾರರಿಗೆ ಉಂಟಾಗುವ ಅಪಾಯದ ಕುರಿತು  ಚರ್ಚೆಗೆ ವಿಪಕ್ಷಗಳು ಒತ್ತಾಯಿಸುತ್ತಿವೆ. ಸಂಸದೀಯ ಸಮಿತಿ ಅಥವಾ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಿಂದ ತನಿಖೆ ನಡೆಸುವಂತೆಯೂ ಒತ್ತಾಯಿಸುತ್ತಿವೆ. 

Similar News