ಮತಾಂತರ ನಿಗ್ರಹ ಕಾಯಿದೆ ವಿರುದ್ಧ ಅರ್ಜಿ: ಐದು ರಾಜ್ಯಗಳಿಗೆ ಸುಪ್ರೀಂಕೋರ್ಟ್ ನೋಟಿಸ್‌

Update: 2023-02-03 12:21 GMT

ಹೊಸದಿಲ್ಲಿ: ಐದು ರಾಜ್ಯಗಳಾದ ಛತ್ತೀಸಗಢ, ಗುಜರಾತ್‌, ಕರ್ನಾಟಕ, ಹರ್ಯಾಣ ಮತ್ತು ಜಾರ್ಖಂಡ್‌ ಇವುಗಳು ಹೊಸತಾಗಿ ಜಾರಿಗೆ ತಂದಿರುವ ಮತಾಂತರ ನಿಗ್ರಹ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್‌ ಈ ರಾಜ್ಯಗಳಿಗೆ ನೋಟಿಸ್‌ ಜಾರಿಗೊಳಿಸಿದೆ. ಈ ಹಿಂದೆ ನಾಲ್ಕು ಇತರ ರಾಜ್ಯಗಳಾದ ಉತ್ತರ ಪ್ರದೇಶ. ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶಗಳಿಗೂ ನ್ಯಾಯಾಲಯ ನೋಟಿಸ್‌ ಜಾರಿಗೊಳಿಸಿತ್ತು.

ಅರ್ಜಿದಾರರಲ್ಲಿ ಹೋರಾಟಗಾರ್ತಿ ತೀಸ್ತಾ ಸೇಟಲ್ವಾಡ್‌ ಅವರು ನಡೆಸುವ ಎನ್‌ಜಿಒ ಸಿಟಿಜನ್ಸ್‌ ಫಾರ್‌ ಪೀಸ್‌ ಎಂಡ್‌ ಜಸ್ಟಿಸ್‌ ಕೂಡ ಸೇರಿದೆ.

ಮತಾಂತರ ನಿಗ್ರಹ ಕಾನೂನುಗಳ ವಿರುದ್ಧ ಡಿಸೆಂಬರ್‌ 2019 ರಲ್ಲಿ ಮೊದಲು ಅರ್ಜಿ ಸಲ್ಲಿಸಲಾಗಿತ್ತು. ಆದರೆ ನಂತರ ಇನ್ನೂ ಐದು ರಾಜ್ಯಗಳು ಇಂತಹ ಕಾನೂನುಗಳನ್ನು ಜಾರಿಗೆ ತಂದಿದ್ದವು. ನಂತರ ಸಿಟಿಜನ್ಸ್‌ ಫಾರ್‌ ಪೀಸ್‌ ಎಂಡ್‌ ಜಸ್ಟಿಸ್‌ ತನ್ನ ಅರ್ಜಿಯನ್ನು ಪರಿಷ್ಕರಿಸಿ ಐದು ರಾಜ್ಯಗಳನ್ನು ಪ್ರತಿವಾದಿಗಳನ್ನಾಗಿಸಿತ್ತು.

Similar News