‘ತಾಲಿಬಾನ್’ ನಂಟಿನ ವ್ಯಕ್ತಿಯಿಂದ ಎನ್ಐಎಗೆ ಇಮೇಲ್ ಬೆದರಿಕೆ

Update: 2023-02-03 15:16 GMT

ಮುಂಬೈ,ಫೆ.3: ತಾಲಿಬಾನ್ ಜೊತೆ ನಂಟು ಹೊಂದಿರುವ ವ್ಯಕ್ತಿಯೊಬ್ಬ ಮುಂಬೈ ಮೇಲೆ ದಾಳಿ ನಡೆಸಲಿದ್ದಾನೆಂದು ಬೆದರಿಕೆಯೊಡ್ಡುವ ಇಮೇಲ್ , ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ಮುಂಬೈ ಕಚೇರಿಗೆ ಬಂದಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಇಮೇಲ್ ಬೆದರಿಕೆಯ ಬೆನ್ನಲ್ಲೇ ಮುಂಬೈ ಮಹಾನಗರ ಪೊಲೀಸರು ಹಾಗೂ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ATS) ಅನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೆದರಿಕೆ ಸಂದೇಶವನ್ನು ರವಾನಿಸಲು ಬಳಸಲಾದ ಇಮೇಲ್ ವಿಳಾಸದಲ್ಲಿ ‘ಸಿಐಎ’ ಎಂಬ ಎಂಬ ಪದವಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಾಲಿಬಾನ್ ಜೊತೆ ಸಂಪರ್ಕವಿರುವ ವ್ಯಕ್ತಿಯೊಬ್ಬ ಮುಂಬೈ ಮೇಲೆ ದಾಳಿ ನಡೆಸಲಿದ್ದಾನೆಂದು ಈಮೇಲ್ ರವಾನಿಸಿದವನು ಹೇಳಿಕೊಂಡಿದ್ದಾನೆ.

ಕಳೆದ ತಿಂಗಳು ಕೂಡಾ ಇಂತಹದೇ ಈಮೇಲ್ ಎನ್ಐಎ ಕಾರ್ಯಾಲಯಕ್ಕೆ ಬಂದಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದರಾದರೂ,ಬೆದರಿಕೆ ಸಂದೇಶದಲ್ಲಿ ಯಾವುದೇ ಹುರುಳಿಲ್ಲವೆಂಬುದನ್ನು ತನಿಖೆಯಿಂದ ಕಂಡುಕೊಂಡಿದ್ದರು.

ಈ ಮೊದಲು ಕೂಡಾ ಇಂತಹ ಬೆದರಿಕೆಯ ಇಮೇಲ್ ಗಳು ಎನ್ಐಎ ಬಂದಿದ್ದು, ಇದೊಂದು ಕಿಡಿಗೇಡಿಯ ಕೃತ್ಯವಾಗಿರುವ ಸಾಧ್ಯತೆಯಿದೆಯೆದು ಪೊಲೀಸರು ಶಂಕಿಸಿದ್ದಾರೆ.

Similar News