​ನಿಮಿಷಕ್ಕೆ 2.5 ಲಕ್ಷ ಆನ್‍ಲೈನ್ ಟಿಕೆಟ್ ನೀಡಿಕೆಗೆ ರೈಲ್ವೆ ಸಜ್ಜು

Update: 2023-02-04 02:00 GMT

ಹೊಸದಿಲ್ಲಿ: ಟಿಕೆಟ್ ನೀಡಿಕೆ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಷ್ಕರಿಸುವ ಮೂಲಕ ಆನ್‍ಲೈನ್‍ನಲ್ಲಿ ರೈಲು ಟಿಕೆಟ್‍ಗಳನ್ನು ನೀಡುವ ಹಾಗೂ ನಿಮ್ಮ ಸಂದೇಹಗಳಿಗೆ ತ್ವರಿತವಾಗಿ ಸ್ಪಂದಿಸಲು ಭಾರತೀಯ ರೈಲ್ವೆ ಸಜ್ಜಾಗುತ್ತಿದೆ. ಮುಂದಿನ ಪೀಳೀಗೆಯ ಇ-ಟಿಕೆಟಿಂಗ್ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಿಮ್ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಪ್ರಸ್ತುತ ಪ್ರತಿ ನಿಮಿಷಕ್ಕೆ 25 ಸಾವಿರ ಟಿಕೆಟ್‍ಗಳನ್ನು ವಿತರಿಸಲಾಗುತ್ತಿದ್ದು, ಮುಂದಿನ ಸೆಪ್ಟೆಂಬರ್  ನಿಂದ ಇದು 2.5 ಲಕ್ಷಕ್ಕೆ ಹೆಚ್ಚಲಿದೆ ಎಂದು ಅವರು ಹೇಳಿದ್ದಾರೆ.

"ಟಿಕೆಟ್ ನೀಡಿಕೆ ಹಾಗೂ ಪ್ರಶ್ನೆಗಳಿಗೆ ಸ್ಪಂದಿಸುವ ಸಾಮಥ್ರ್ಯವನ್ನು ಹತ್ತು ಪಟ್ಟು ಹೆಚ್ಚಿಸುವುದು ನಮ್ಮ ಗುರಿ. ಸೆಪ್ಟೆಂಬರ್ ವೇಳೆಗೆ ಇಡೀ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಪ್ರಶ್ನೆಗಳಿಗೆ ಸ್ಪಂದಿಸುವ ಸಾಮಥ್ರ್ಯವನ್ನು ಕೂಡಾ ಹಾಲಿ ಇರುವ ಪ್ರತಿ ನಿಮಿಷಕ್ಕೆ 4 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಿಸಲಾಗುತ್ತಿದೆ" ಎಂದು ವಿವರಿಸಿದ್ದಾರೆ.

ಟಿಕೆಟ್ ನೀಡಿಕೆಯನ್ನು ಯಾರೂ ಬೈಪಾಸ್ ಮಾಡಲು ಸಾಧ್ಯವಾಗದಂತೆ ಸುರಕ್ಷಾ ವ್ಯವಸ್ಥೆಯನ್ನು ಕೂಡಾ ಸುಧಾರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. 2023-24ರಲ್ಲಿ ಪ್ರಯಾಣಿಕರ ಅನುಕೂಲಗಳನ್ನು ಹೆಚ್ಚಿಸಲು ತೀವ್ರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Similar News