ಉಡುಪಿ | ಕರಾಟೆ ಕಪ್ಪು ಪಟ್ಟಿ ಪರೀಕ್ಷೆ: 7 ವಿದ್ಯಾರ್ಥಿಗಳು ತೇರ್ಗಡೆ

Update: 2023-02-04 10:36 GMT

ಉಡುಪಿ, ಫೆ.4: ಜಪಾನ್ ಶೋಟೊಕಾನ್ ಕರಾಟೆ ಡು ಕನ್ನಿಂಜುಕು ಆರ್ಗನೈಸೇಶನ್ ಇಂಡಿಯಾ ಇವರ ವತಿಯಿಂದ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಕರಾಟೆ ಕಪ್ಪು ಪಟ್ಟಿ ಪರೀಕ್ಷೆಯಲ್ಲಿ ಕರ್ನಾಟಕದ ಏಳು ಮಂದಿ ವಿದ್ಯಾರ್ಥಿಗಳು ಭಾಗವಹಿಸಿ ತೇರ್ಗಡೆ ಹೊಂದಿದ್ದಾರೆ.

ಇದೇ ಸಂದರ್ಭದಲ್ಲಿ ಕರಾಟೆ ಇಂಡಿಯಾ ಆರ್ಗನೈಸೇಷನ್ ನಡೆಸಿದ ಕಪ್ಪು ಪಟ್ಟಿ ಪರೀಕ್ಷೆಯಲ್ಲಿ ಏಳು ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕ್ರೆಸೆಂಟ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮುಹಮ್ಮದ್ ಅದ್ನಾನ್, ಮುಹಮ್ಮದ್ ಸಯೀದ್, ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್‌ನ ಮುಹಮ್ಮದ್ ಅಝೀಮ್ ಖಾನ್, ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯ ಫಾತಿಮಾ ಸದ್ಧಾಪ್, ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ನಿತಿನ್ ಎಚ್.ಶೆಟ್ಟಿ, ಮಂಗಳೂರು ಸೈಂಟ್ ಅಲೋಸಿಯಸ್ ಪಿಯು ಕಾಲೇಜಿನ ಮುಹಮ್ಮದ್ ಸಾಲಿಯತ್, ಉಡುಪಿ ಸ್ನೇಹ ಟ್ಯುಟೋರಿಯಲ್‌ನ ದಯನ್ ಪಿ.ಪೂಜಾರಿ ವಿದ್ಯಾರ್ಥಿಗಳಾಗಿದ್ದಾರೆ.

ಕಾಪುವಿನ ಕರಾಟೆ ಮುಖ್ಯ ಶಿಕ್ಷಕ ಶಂಶುದ್ದೀನ್ ಎಚ್.ಶೇಖ್ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.

Similar News