ಹಿಂಡೆನ್‌ಬರ್ಗ್‌ ವರದಿ ಬಿಡುಗಡೆಯಾದ 10 ದಿನಗಳಲ್ಲಿ 118 ಬಿಲಿಯನ್‌ ಡಾಲರ್‌ ಕಳೆದುಕೊಂಡ ಅದಾನಿ ಸಂಸ್ಥೆ

Update: 2023-02-04 13:33 GMT

ಹೊಸದಿಲ್ಲಿ: ಗೌತಮ್‌ ಅದಾನಿ (Gautam Adani) ನೇತೃತ್ವದ ಅದಾನಿ ಸಮೂಹವು ಲೆಕ್ಕಪತ್ರ ಅವ್ಯವಹಾರ ಮತ್ತು ಷೇರು ಮೌಲ್ಯಗಳಿಗೆ ಸಂಬಂಧಿಸಿದಂತೆ ಅವ್ಯವಹಾರಗಳನ್ನು ನಡೆಸಿದೆ ಎಂಬ ಕುರಿತು ಅಮೆರಿಕಾದ ಹಿಂಡೆನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯ (Hindenburg Research) ಸ್ಫೋಟಕ ತನಿಖಾ ವರದಿ ಹೊರಬಿದ್ದ ನಂತರದ ಹತ್ತು ದಿನಗಳಲ್ಲಿ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯ 217 ಬಿಲಿಯನ್‌ ಡಾಲರ್‌ನಿಂದ 99 ಬಿಲಿಯನ್‌ ಡಾಲರ್‌ಗೆ  ಕುಸಿದಿದೆ. ಅಂದರೆ ಹತ್ತು ದಿನಗಳಲ್ಲಿ ಅರ್ಧದಷ್ಟು ಮೌಲ್ಯ, 118 ಬಿಲಿಯನ್‌ ಡಾಲರ್‌ ಅನ್ನು ಅದಾನಿ ಸಂಸ್ಥೆ ಕಳೆದುಕೊಂಡಿದೆ.

ಅದಾನಿ ಸಮೂಹದ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿತಕ್ಕೆ ಕಾರಣವಾದ ಹಿಂಡೆನ್‌ಬರ್ಗ್‌ ವರದಿಯನ್ನು ಹೊರತಂದ ಹಿಂಡೆನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯನ್ನು ಕನೆಕ್ಟಿಕಟ್‌ ಮೂಲದ ನಥಾನ್‌ ಆಂಡರ್ಸನ್‌ ಎಂಬವರು 2017 ರಲ್ಲಿ ಆರಂಭಿಸಿದ್ದರು.

2020 ರಲ್ಲಿ ಇಲೆಕ್ಟ್ರಿಕ್‌  ವಾಹನ ತಯಾರಿಕಾ ಸಂಸ್ಥೆ ನಿಕೋಲಾ ಕುರಿತ ಅವ್ಯವಹಾರಗಳ ವರದಿಯನ್ನು ಹಿಂಡೆನ್‌ಬರ್ಗ್‌ ಹೊರತಂದ ನಂತರ ಸಂಸ್ಥೆಯ ಷೇರು ಮೌಲ್ಯಗಳೂ ಪಾತಾಳಕ್ಕೆ ಕುಸಿದಿದ್ದವು. ನಿಕೋಲಾ ಸಂಸ್ಥೆಯ ಸ್ಥಾಪಕ ಟ್ರೆವರ್‌ ಮಿಲ್ಟನ್‌ ನಂತರ ಹೂಡಿಕೆದಾರರನ್ನು ವಂಚಿಸಿದ  ಪ್ರಕರಣದಲ್ಲಿ ದೋಷಿ ಎಂದು ಘೋಷಿತರಾಗಿದ್ದರು.

ಇದನ್ನೂ ಓದಿ: ಜಾಮಿಯಾ ಹಿಂಸಾಚಾರ ಪ್ರಕರಣದಲ್ಲಿ ಶರ್ಜೀಲ್‌, ಸಫೂರ ಝರ್ಗರ್‌ ಮತ್ತಿತರರನ್ನು ಪೊಲೀಸರು ಬಲಿಪಶು ಮಾಡಿದ್ದರು: ನ್ಯಾಯಾಲಯ

Similar News