ಉಡುಪಿ| ಮಗು ನಾಪತ್ತೆ: ಸ್ನೇಹಿತನ ವಿರುದ್ಧ ದೂರು ನೀಡಿದ ತಾಯಿ

Update: 2023-02-04 14:35 GMT

ಉಡುಪಿ: ಮಗುವನ್ನು ಕರೆದುಕೊಂಡು ಹೋಗಿದ್ದ ತಾಯಿಯ ಸ್ನೇಹಿತನೋರ್ವ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಾಗಲಕೋಟೆ ಮೂಲದ ಭೀಮಪ್ಪ ಎಂಬವರ ಪತ್ನಿ ಶಾಂತಾ ಎಂಬವರು ಮೂಡುಸಗ್ರಿ ಎಂಬಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಇವರ ಮಗಳು  ಸುಕನ್ಯಾ(3)ಳನ್ನು ಜ8ರಂದು ಮಹಿಳೆಯ ಸ್ನೇಹಿತ ಸಂಗಮೇಶ್, ಆತನ ಸ್ನೇಹಿತ ಶಂಕರನ ಎಂಬವರ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದನು. ಸಂಜೆ ಈತ ವಾಪಾಸು ಒಬ್ಬನೇ ಮನೆಗೆ ಬಂದಾಗ ಶಾಂತಾ ಮಗುವಿನ ಬಗ್ಗೆ ವಿಚಾರಿಸಿದರು. ಆಗ ಆತ ತಾನು ಮಗುವನ್ನು ಕರೆದುಕೊಂಡು ಬರುವುದಾಗಿ ಹೇಳಿ ಜ.12 ರಂದು ಹೋದವನು ಈವರೆಗೆ ಮನೆಗೆ ಬಾರದೇ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಮಗುವಿನ ಬಗ್ಗೆ ಶಂಕರ್‌ಗೆ ಕರೆ ಮಾಡಿ ವಿಚಾರಿಸಿದಾಗ ಸಂಗಮೇಶ್ ಹಾಗೂ ಮಗಳು ಸುಕನ್ಯಾ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದರು. ಹೀಗಾಗಿ ಮಗುವನ್ನು  ಸಂಗಮೇಶ್ ಕರೆದುಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಉಡುಪಿ: ಮಾವಿನಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಮೃತ್ಯು

Similar News