ಅಸ್ಸಾಂ: ಬಾಲ್ಯ ವಿವಾಹದ ವಿರುದ್ಧ ಮುಂದುವರಿದ ಪೊಲೀಸರ ಕಾರ್ಯಾಚರಣೆ; ಮೂರು ದಿನಗಳಲ್ಲಿ 2,278 ಮಂದಿಯ ಬಂಧನ

Update: 2023-02-05 16:46 GMT

ಗುವಾಹತಿ, ಫೆ. 5: ಅಸ್ಸಾಂನಲ್ಲಿ ಬಾಲ್ಯ ವಿವಾಹದ ವಿರುದ್ಧ ರಾಜ್ಯ ಪೊಲೀಸರು ಮೂರನೇ ದಿನವಾದ ರವಿವಾರ ಕೂಡ ಕಾರ್ಯಾಚರಣೆ ಮುಂದುವರಿಸಿದ್ದು, ಇದುವರೆಗೆ ಬಂಧಿತರಾದವರ ಸಂಖ್ಯೆ 2,278ಕ್ಕೆ ಏರಿದೆ. ರಾಜ್ಯಾದ್ಯಂತ ದಾಖಲಿಸಲಾದ 4,074 ಎಫ್ಐಆರ್ ಆಧಾರದಲ್ಲಿ ಬಂಧನ ನಡೆದಿದೆ.

ವಿಶ್ವನಾಥನಿಂದ 139, ಬಾರ್‌ಪೇಟದಿಂದ  130 ಹಾಗೂ ಧುಬ್ರಿಯಿಂದ 126 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. 100ಕ್ಕಿಂತ ಅಧಿಕ ಮಂದಿಯನ್ನು ಬಂಧಿಸಲಾದ ಇತರ ಜಿಲ್ಲೆಗಳೆಂದರೆ ಬಕ್ಸಾ (123), ಬೊಂಗೈಗಾಂವ್ ಹಾಗೂ ಹೊಜೈ (ತಲಾ 117) ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಾಲ್ಯ ವಿವಾಹದ ವಿರುದ್ಧ ಧುಬ್ರಿಯಲ್ಲಿ ಅತ್ಯಧಿಕ 374 ಎಫ್ಐಆರ್ ಗಳು ದಾಖಲಾಗಿವೆ. ಅನಂತರ ಅತಿ ಹೆಚ್ಚು ಎಫ್ಐಆರ್ ಗಳು ಹೊಜೈಯಲ್ಲಿ 225 ಹಾಗೂ ಮೊರಿಗಾಂವ್ ನಲ್ಲಿ 224 ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

2026ರಲ್ಲಿ ನಡೆಯಲಿರುವ ಮುಂದಿನ ವಿಧಾನ ಸಭೆ ಚುನಾವಣೆ ವರೆಗೆ ಬಾಲ್ಯ ವಿವಾಹದ ವಿರುದ್ಧ ಕಾರ್ಯಾಚರಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಶನಿವಾರ ಪ್ರತಿಪಾದಿಸಿದ್ದರು. ಬಾಲ್ಯ ವಿವಾಹದಲ್ಲಿ ಭಾಗಿಯಾದ ಹೆತ್ತವರಿಗೆ ಪ್ರಸಕ್ತ ನೋಟಿಸ್ ನೀಡಿ ಬಿಡಲಾಗಿದೆ ಎಂದು ಅವರು ತಿಳಿಸಿದ್ದರು.

Similar News