ರಾಹುಲ್ ಗಾಂಧಿ ಆಪ್ತನ ವಿಚಾರಣೆ: ಸಾಕೇತ್ ಪ್ರಕರಣಕ್ಕೆ ತಿರುವು

Update: 2023-02-06 04:46 GMT

ಹೊಸದಿಲ್ಲಿ: ಕಾನೂನು ಜಾರಿ ನಿರ್ದೇಶನಾಲಯ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಆಪ್ತ ಮತ್ತು ಕಾಂಗ್ರೆಸ್ ಸಂಶೋಧನಾ ತಂಡದ ಅಲಂಕಾರ್ ಸವಾಯಿ ಅವರನ್ನು ವಿಚಾರಣೆಗೆ ಗುರಿಪಡಿಸುವ ಮೂಲಕ ಟಿಎಂಸಿ ಮುಖಂಡ ಸಾಕೇತ್ ಗೋಖಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೈಗೊಳ್ಳಲು ಗೋಖಲೆಯವರಿಗೆ ಸವಾಯಿ ನೆರವು ನೀಡಿದ್ದರು ಎಂಬ ಆರೋಪದಲ್ಲಿ ಅಧಿಕಾರಿಗಳು ಕಳೆದ ವಾರ ಅಹ್ಮದಾಬಾದ್‌ನಲ್ಲಿ ಹಲವು ಬಾರಿ ಸವಾಯಿ ಅವರನ್ನು ವಿಚಾರಣೆಗೆ ಗುರಿಪಡಿಸಿದ್ದರು. ಗೋಖಲೆಯವರ ಬ್ಯಾಂಕ್ ಖಾತೆಗೆ ಸವಾಯಿ ದೊಡ್ಡ ಮೊತ್ತವನ್ನು ಪಾವತಿಸಿರುವುದ ಇಲಾಖೆಗೆ ದೃಢಪಟ್ಟಿದೆ ಎಂದು ಹೇಳಲಾಗಿದೆ.

ತಮ್ಮ ಖಾತೆಗೆ ಠೇವಣಿ ಮಾಡಲಾದ ಮೊತ್ತದಲ್ಲಿ ಕೆಲವನ್ನು ಸವಾಯಿ ಪಾವತಿಸಿದ್ದಾಗಿ ಗೋಖಲೆ ವಿಚಾರಣೆ ವೇಳೆ ಬಹಿರಂಗಪಡಿಸಿದ್ದರು. ಮೋದಿಯವರ ಮೊರ್ಬಿ ಭೇಟಿಗೆ 30 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಹರಡಿದ ಆರೋಪದಲ್ಲಿ ಗೋಖಲೆಯವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದರು. ಅವರಿಗೆ ಜಾಮೀನು ಮಂಜೂರು ಮಾಡಿದ ಬಳಿಕ ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಮತ್ತೆ ಬಂಧಿಸಲಾಗಿತ್ತು.

Similar News