ಹಿಮಾಚಲ ಪ್ರದೇಶದಲ್ಲಿ ಹಿಮಪಾತ: ಕಾರ್ಮಿಕರಿಬ್ಬರ ಮೃತ್ಯು,ಓರ್ವ ನಾಪತ್ತೆ

Update: 2023-02-06 16:54 GMT

ಶಿಮ್ಲಾ,ಫೆ.6: ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯ ಶಿಂಕುಲಾ-ದರ್ಚಾ ರಸ್ತೆಯ ಚಿಕಾ ಗ್ರಾಮದಲ್ಲಿ ರವಿವಾರ ಸಂಜೆ ಹಿಮಪಾತ ಸಂಭವಿಸಿದ್ದು,ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಓರ್ವ ಕಾರ್ಮಿಕ ನಾಪತ್ತೆಯಾಗಿದ್ದು,ಆತ ಹಿಮದಡಿ ಸಿಲುಕಿರುವ ಭೀತಿ ವ್ಯಕ್ತವಾಗಿದೆ.

ಮೂವರು ಕಾರ್ಮಿಕರು ಸ್ನೋ ಕಟರ್‌(Snow Cutter)ಗಳೊಂದಿಗೆ ಹಿಮದ ರಾಶಿಯಲ್ಲಿ ಸಿಕ್ಕಿಕೊಂಡಿದ್ದು,ರಕ್ಷಣಾ ತಂಡಗಳು ನೇಪಾಳದ ರಾಮ ಬುದ್ಧ ಮತ್ತು ಚಂಬಾ ನಿವಾಸಿ ರಾಕೇಶ್ ಎನ್ನುವವರ ಶವಗಳನ್ನು ಹೊರಕ್ಕೆ ತೆಗೆದಿವೆ. ನೇಪಾಳ ನಿವಾಸಿ ಪಾಸಂಗ್ ಚೆರಿಂಗ್ ಲಾಮಾ (27) ಎಂಬಾತ ನಾಪತ್ತೆಯಾಗಿದ್ದಾನೆ. ದುರಂತ ಸಂಭವಿಸಿದಾಗ ಗಡಿ ರಸ್ತೆಗಳ ಸಂಸ್ಥೆಗೆ ಸೇರಿದ ಕಾರ್ಮಿಕರು ರಸ್ತೆಯಲ್ಲಿದ್ದ ಹಿಮವನ್ನು ತೆಗೆಯುತ್ತಿದ್ದರು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

ರವಿವಾರ ರಾತ್ರಿ ತಾಪಮಾನ ಮತ್ತು ಗೋಚರತೆ ಕಡಿಮೆಯಾಗಿದ್ದರಿಂದ ಸ್ಥಗಿತಗೊಳಿಸಲಾಗಿದ್ದ ರಕ್ಷಣಾ ಕಾರ್ಯಾಚರಣೆಯನ್ನು ಸೋಮವಾರ ಬೆಳಿಗ್ಗೆ ಪುನರಾರಂಭಿಸಲಾಗಿತ್ತು ಎಂದರು.

Similar News