ಪ್ರಧಾನಿಯ 'ಪರೀಕ್ಷಾ ಪೆ ಚರ್ಚಾ': ಐದು ವರ್ಷಗಳಲ್ಲಿ ರೂ. 28 ಕೋಟಿ ವೆಚ್ಚ

Update: 2023-02-07 07:35 GMT

ಹೊಸದಿಲ್ಲಿ: ಪ್ರಧಾನಿಯವರ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮದ ಮೊದಲ  ಐದು ವರ್ಷಗಳ ಆವೃತ್ತಿಯಲ್ಲಿ ರೂ. 28 ಕೋಟಿ ವೆಚ್ಚ ಮಾಡಲಾಗಿದೆ ಎಂದು  ಪ್ರಶ್ನೆಯೊಂದಕ್ಕೆ ಶಿಕ್ಷಣ ಸಚಿವಾಲಯವು ಸೋಮವಾರ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದೆ ಎಂದು timesofindia.com ವರದಿ ಮಾಡಿದೆ.

ಜನವರಿ 27ರಂದು ಪರೀಕ್ಷಾ ಚರ್ಚಾ ಕಾರ್ಯಕ್ರಮದ ಆರನೆ ಅವೃತ್ತಿಯು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ನಡುವೆ ನಡೆದಿತ್ತು.

ಈ ಕುರಿತು ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವೆ ಅನ್ನಪೂರ್ಣ ದೇವಿ, 2018ರಲ್ಲಿ ಹಮ್ಮಿಕೊಳ್ಳಲಾಗಿದ್ದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ ಮೊದಲ ಆವೃತ್ತಿಗೆ ರೂ. 3.6 ಕೋಟಿ, 2019ರಲ್ಲಿ ರೂ. 4.9 ಕೋಟಿ, 2020ರಲ್ಲಿ ರೂ. 5.6 ಕೋಟಿ, 2021ರಲ್ಲಿ ರೂ. 6 ಕೋಟಿ ಹಾಗೂ 2022ರಲ್ಲಿ ರೂ. 8.6 ಕೋಟಿ ವೆಚ್ಚ ಮಾಡಲಾಗಿದೆ ಎಂದು ಲಿಖಿತ ಉತ್ತರ ನೀಡಿದರು. ಈ ವರ್ಷದ ಆವೃತ್ತಿಗೆ ಮಾಡಲಾಗಿರುವ ವೆಚ್ಚದ ಕುರಿತು ಮಾಹಿತಿಯಲ್ಲಿ ವಿವರಗಳನ್ನು ನಮೂದು ಮಾಡಲಾಗಿರಲಿಲ್ಲ.

Similar News