ಹೊಸ ಹಜ್ ನೀತಿ: ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ...

Update: 2023-02-07 12:24 GMT

ಹೊಸದಿಲ್ಲಿ: ಪ್ರಸಕ್ತ ಸಾಲಿನಲ್ಲಿ 1.75 ಮಂದಿ ಹಜ್ ಯಾತ್ರೆ ಕೈಗೊಳ್ಳಲು ಕೋಟಾ ನಿಗದಿಪಡಿಸಲಾಗಿದ್ದು, ಹೊಸ ಹಜ್ ನೀತಿಯಡಿ ಕೋಟಾದ ಶೇಕಡ 90ರಷ್ಟು ಭಾಗವನ್ನು ಭಾರತದ ಹಜ್ ಕಮಿಟಿಗೆ ಹಂಚಿಕೆ ಮಾಡಲಾಗುತ್ತದೆ ಹಾಗೂ ಉಳಿಕೆ ಶೇಕಡ 10 ನ್ನು ಖಾಸಗಿ ಆಪರೇಟರ್‍ಗಳಿಗೆ ನೀಡಲಾಗುತ್ತದೆ. ಈ ವರ್ಷದ ಹಜ್ ಯಾತ್ರೆಗೆ ಸರ್ಕಾರ ಇನ್ನಷ್ಟೇ ಅರ್ಜಿಗಳನ್ನು ತೆರೆಯಬೇಕಾಗಿದೆ.

2023ರ ಹಜ್ ನೀತಿಯಡಿ, ಸಂಪರ್ಣ ಸರ್ಕಾರಿ ವಿವೇಚನಾ ಕೋಟಾವನ್ನು ರದ್ದುಪಡಿಸಲಾಗಿದೆ ಹಾಗೂ ಇದನ್ನು ಸಾಮಾನ್ಯ ವರ್ಗದಲ್ಲೇ ವಿಲೀನಗೊಳಿಸಲಾಗಿದೆ.

ಅಂತೆಯೇ ಹೊಸ ನೀತಿಯಡಿ ಮಹಿಳೆಯರು, ಶಿಶುಗಳು ಹಾಗೂ ಅಂಗವಿಕಲರಿಗೆ ಮತ್ತು ವೃದ್ಧರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತದೆ. 2023ರ ಹಜ್ ಯಾತ್ರೆಗೆ 25 ಪ್ರಯಾಣ ಆರಂಭದ ಕೇಂದ್ರಗಳು ಇರುತ್ತವೆ. ಈ ಕೇಂದ್ರಗಳ ಏರಿಕೆಯಿಂದಾಗಿ ಅಗರ್ತಲದಂಥ ಗುಡ್ಡಗಾಡು ಪ್ರದೇಶಗಳ ಜನ ಕೂಡಾ ಪ್ರವಾಸ ಕೈಗೊಳ್ಳಲು ಅನುಕೂಲವಾಗಲಿದೆ. ಸೌದಿ ಅರೇಬಿಯಾದ ಷರತ್ತುಗಳ ಅನುಸಾರವಾಗಿ 45 ವರ್ಷ ಮೇಲ್ಪಟ್ಟ ಒಬ್ಬಂಟಿ ಮಹಿಳೆಯರು ಕೂಡಾ ಸ್ವಂತವಾಗಿ ಅರ್ಜಿ ಸಲ್ಲಿಸಬಹುದು. 

ಈ ವರ್ಗದಲ್ಲಿ ಅರ್ಜಿ ಸಲ್ಲಿಸಿದವರನ್ನು ಭಾರತದ ಹಜ್ ಕಮಿಟಿ ಪ್ರತ್ಯೇಕ ಗುಂಪಿನಲ್ಲಿ ಯಾತ್ರೆಗೆ ವ್ಯವಸ್ಥೆ ಮಾಡಲಿದೆ.
"ಹೊಸ ಐತಿಹಾಸಿಕ ಹಜ್ ನೀತಿ ಯಾತ್ರಿಗಳಿಗೆ ಆರ್ಥಿಕವಾಗಿ ನಿರಾಳತೆಗೆ ಕಾರಣವಾಗಲಿದೆ. ಮೊಟ್ಟಮೊದಲ ಬಾರಿಗೆ ಅರ್ಜಿ ನಮೂನೆಗಳು ಉಚಿತವಾಗಿರುತ್ತವೆ. ಹಜ್ ಪ್ಯಾಕೇಜ್ ವೆಚ್ಚವನ್ನು ಸುಮಾರು 50 ಸಾವಿರ ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ" ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ.

Similar News