ಮಂಗಳೂರು: ಎನ್‌ಎಂಪಿಎಗೆ ಆಗಮಿಸಿದ ಮತ್ತೊಂದು ಬೃಹತ್ ಹಡಗು

Update: 2023-02-07 18:28 GMT

ಮಂಗಳೂರು, ಫೆ. 7: ಪಸಕ್ತ ಋತುವಿನ ಐದನೇ ಪ್ರಯಾಣಿಕರ ಹಡಗು ‘ಎಂಎಸ್ ನಾಟಿಕಾ’ ನವ ಮಂಗಳೂರು ಬಂದರಿಗೆ ಮಂಗಳವಾರ ಬೆಳಗ್ಗೆ ಆಗಮಿಸಿತು. 550 ಪ್ರಯಾಣಿಕರು ಹಾಗೂ 400 ಸಿಬ್ಬಂದಿಯನ್ನು ಒಳಗೊಂಡ ಹಡಗು ಬರ್ತ್ ಸಂಖ್ಯೆ 4ರಲ್ಲಿ ನಿಂತಿತು.

ಈ ಹಡಗಿನ ಒಟ್ಟು ಉದ್ದ 180.5 ಮೀಟರ್. ಇದು 30,277 ಟನ್ ಭಾರವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಈ ಹಡಗು ಮಸ್ಕತ್‌ನಿಂದ ಮಾಲೆ (ಮಾಲ್ಡಿವ್ಸ್) ಮೂಲಕ ಭಾರತಕ್ಕೆ ಆಗಮಿಸಿದೆ. ಈ ಹಡಗು ಹಿಂದೆ ಮುಂಬೈ ಹಾಗೂ ಮುರ್ಮುಗೋವಾ ಬಂದರಿನಲ್ಲಿ ನಿಂತಿತ್ತು. ಈ ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ಯಕ್ಷಗಾನ ಹಾಗೂ ಚೆಂಡೆಯಂತಹ ಸಾಂಪ್ರದಾಯಿಕ ಕಲೆಗಳ ಮೂಲಕ ಸ್ವಾಗತಿಸಲಾಯಿತು.

ಪ್ರಯಾಣಿಕರು 2 ಸೆಟಲ್ ಬಸ್‌ಗಳು ಸೇರಿದಂತೆ 15 ಬಸ್‌ಗಳಲ್ಲಿ ಮಂಗಳೂರಿನ ವಿವಿಧ ಪ್ರವಾಸಿ ಸ್ಥಳ, ದೇವಾಲಯ, ಚರ್ಚ್, ಸ್ಥಳೀಯ ಮಾರುಕಟ್ಟೆ ಹಾಗೂ ಇತರ ಸ್ಥಳಗಳಿಗೆ ಭೇಟಿ ನೀಡಿದರು.

Similar News