×
Ad

'ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಟೀಕಿಸಿದ ನಟ ಪ್ರಕಾಶ್ ರಾಜ್‌ರನ್ನು 'ನಗರ ನಕ್ಸಲ್' ಎಂದ ವಿವೇಕ್ ಅಗ್ನಿಹೋತ್ರಿ

Update: 2023-02-09 23:38 IST

ಹೊಸ ದಿಲ್ಲಿ: "ಸಣ್ಣ ಜನರು ಕೂಡಿ ನಿರ್ಮಿಸಿದ್ದ #KashmirFiles ಸಿನಿಮಾ ನಗರ ನಕ್ಸಲರಿಗೆ ಎಷ್ಟು ನಿದ್ರಾರಹಿತ ರಾತ್ರಿಗಳನ್ನು ನೀಡಿದೆಯೆಂದರೆ, ಅವರ ಪೈಕಿ ಒಂದು ನಾಯಿಯು ಆ ಚಿತ್ರದ ಪ್ರೇಕ್ಷಕರನ್ನು ಬೊಗಳುವ ನಾಯಿಗಳು ಎಂದು ಕರೆಯುವಷ್ಟು ಸಮಸ್ಯೆಗೊಳಗಾಗಿದೆ. ಮಾನ್ಯ ಅಂಧಕಾರರಾಜ್, ನಾನೇಗೆ ಭಾಸ್ಕರ್ ಪಡೆಯಲಿ? ಅವರೆಂದಿಗೂ ನಿಮ್ಮವರೆ" ಎಂದು ಆ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Ranjan Agnihotri)ಟ್ವೀಟ್ ಮಾಡಿ, ನಟ ಪ್ರಕಾಶ್ ರಾಜ್‌ರನ್ನು ಟೀಕಿಸಿದ್ದಾರೆ.

ಇದಕ್ಕೂ ಮುನ್ನ, ಇತ್ತೀಚೆಗೆ ಕೇರಳದಲ್ಲಿ ಆಯೋಜನೆಗೊಂಡಿದ್ದ ಮಾತೃಭೂಮಿ ಪತ್ರಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಬಹಿಷ್ಕಾರ ಸಂಸ್ಕೃತಿಯ ಕುರಿತು ಮಾತನಾಡಿದ್ದ ಪ್ರಕಾಶ್ ರಾಜ್, 'ಕಾಶ್ಮೀರ್ ಫೈಲ್ಸ್' (The Kashmir Files)ಚಿತ್ರವನ್ನು ಟೀಕಿಸಿದ್ದರು.

"ಕಾಶ್ಮೀರ್ ಪೈಲ್ಸ್ ಒಂದು ಸಂವೇದನಾರಹಿತ ಸಿನಿಮಾ. ಅದನ್ನು ನಿರ್ಮಿಸಿದ್ದು ಯಾರು ಎಂದು ಎಲ್ಲರಿಗೂ ತಿಳಿದಿದೆ. ಅಂತಾರಾಷ್ಟ್ರೀಯ ತೀರ್ಪುಗಾರರೊಬ್ಬರು ಅವರಿಗೆ ಉಗಿದಿದ್ದರು.  ಚಿತ್ರದ ನಿರ್ದೇಶಕ ಈಗಲೂ " ನನಗೇಕೆ ಆಸ್ಕರ್ ಪ್ರಶಸ್ತಿ ದೊರೆಯಲಿಲ್ಲ?" ಎಂದು ಕೇಳುತ್ತಿದ್ದಾನೆ. ಆತ ಭಾಸ್ಕರ್ ಪ್ರಶಸ್ತಿಯನ್ನೂ ಪಡೆಯುವುದಿಲ್ಲ" ಎಂದು ಕಿಡಿ ಕಾರಿದ್ದರು.

Similar News