×
Ad

ಅದಾನಿಯ 4 ಕಂಪೆನಿಗಳ ಎಮ್‌ಎಸ್‌ಸಿಐ ಸೂಚ್ಯಂಕ ಮೌಲ್ಯಕಡಿತ

Update: 2023-02-10 23:34 IST

ಹೊಸದಿಲ್ಲಿ, ಫೆ. 10: ಅದಾನಿ ಗುಂಪಿ(Adani Group)ನ ನಾಲ್ಕು ಕಂಪೆನಿಗಳ ಫ್ರೀ ಫ್ಲೋಟ್‌ ಸ್ಥಾನಮಾನವನ್ನು ಕಡಿತಗೊಳಿಸುವುದಾಗಿ ಅಮೆರಿಕದ ಜಾಗತಿಕ ಶೇರು ಸೂಚ್ಯಂಕ ನಿರ್ವಾಹಕ ಮೋರ್ಗನ್ ಸ್ಟಾನ್ಲಿ ಕ್ಯಾಪಿಟಲ್ ಇಂಟರ್ನ್ಯಾಷನಲ್(MSCI) ಗುರುವಾರ ತಿಳಿಸಿದೆ.

ಫ್ರೀ ಫ್ಲೋಟ್‌ಎಂದರೆ, ಅಂತರ್‌ರಾಷ್ಟ್ರೀಯ ಹೂಡಿಕೆದಾರರಿಗೆ ಖರೀದಿಗಾಗಿ ಶೇರು ಮಾರುಕಟ್ಟೆಗಳಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಶೇರುಗಳ ಪ್ರಮಾಣ.

ಆದರೂ, ಅದಾನಿ ಗುಂಪಿನ ಕಂಪೆನಿಗಳ ಪರಿಶೀಲನೆ ಬಳಿಕ, ಅವುಗಳನ್ನು ಎಮ್‌ಎಸ್‌ಸಿಐ ಸೂಚ್ಯಂಕಗಳಿಂದ ತೆಗೆದು ಹಾಕದಿರಲೂ ಎಮ್‌ಎಸ್‌ಸಿಐ ನಿರ್ಧರಿಸಿದೆ.

ಎಮ್‌ಎಸ್‌ಸಿಐ ತನ್ನ ತ್ರೈಮಾಸಿಕ ಪರಿಶೀಲನೆಯ ಬಳಿಕ, ಅದಾನಿ ಗುಂಪಿನ ನಾಲ್ಕು ಶೇರುಗಳ ಫ್ರೀ ಫ್ಲೋಟ್ ಸ್ಥಾನಮಾನವನ್ನು ಕಡಿತಗೊಳಿಸಿದೆ. ಎಮ್‌ಎಸ್‌ಸಿಐ ಗ್ಲೋಬಲ್ ಸ್ಟ್ಯಾಂಡರ್ಡ್‌ ಇಂಡೆಕ್ಸ್‌ನಲ್ಲಿ, ಅದಾನಿ ಗುಂಪಿನ ಮುಂಚೂಣಿ ಕಂಪೆನಿ ಅದಾನಿ ಎಂಟರ್‌ಪ್ರೈಸಸ್‌ನ ಮೌಲ್ಯ (ವೇಟಿಂಗ್)ವನ್ನು 0.3 ಶೇಕಡದಷ್ಟು ಕಡಿತಗೊಳಿಸಿ 0.5 ಶೇಕಡಕ್ಕೆ ಇಳಿಸಲಾಗಿದೆ. ಅದಾನಿ ಟ್ರಾನ್ಸ್‌ಮಿಶನ್, ಅದಾನಿ ಟೋಟಲ್‌ಗ್ಯಾಸ್ ಮತ್ತು ಎಸಿಸಿ ಲಿಮಿಟೆಡ್ ಕಂಪೆನಿಗಳ ಮೌಲ್ಯಗಳನ್ನೂ ಕಡಿತಗೊಳಿಸಲಾಗಿದೆ.

ಬಿಲಿಯಾಧೀಶ ಗೌತಮ್‌ ಅದಾನಿ ಒಡೆತನದ ಕಂಪೆನಿಗಳು ಶೇರು ಮಾರುಕಟ್ಟೆಗಳಲ್ಲಿ ಹಸ್ತಕ್ಷೇಪ ನಡೆಸಿ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿಕೊಂಡಿವೆ ಮತ್ತು ಕಂಪೆನಿಗಳು ತಪ್ಪು ಲೆಕ್ಕಗಳನ್ನು ಕೊಟ್ಟು ಹೂಡಿಕೆದಾರರನ್ನು ವಂಚಿಸುತ್ತಿವೆ ಎಂಬುದಾಗಿ ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್ ಆರೋಪಿಸಿದ ಬಳಿಕ ಗುಂಪಿನ ಕಂಪೆನಿಗಳ ಶೇರುಗಳು ಭಾರೀ ಪ್ರಮಾಣದಲ್ಲಿ ಕುಸಿದಿವೆ.

ಏನಿದು ಎಮ್‌ಎಸ್‌ಸಿಐ?

ಎಮ್‌ಎಸ್‌ಸಿಐ ಸೂಚ್ಯಂಕಗಳ ಮೇಲೆ ಜಗತ್ತಿನಾದ್ಯಂತ ಹೂಡಿಕೆದಾರರು ನಿಗಾ ಇಡುತ್ತಾರೆ. ಸೂಚ್ಯಂಕಗಳಲ್ಲಿ ದೇಶಗಳು ಮತ್ತು ಶೇರುಗಳಿಗೆ ನೀಡಲಾಗಿರುವ ಮೌಲ್ಯ (ವೇಟೇಜ್)ವನ್ನು ಆಧರಿಸಿ ಹೂಡಿಕೆಗಳ ಪ್ರಮಾಣವನ್ನು ನಿರ್ಧರಿಸುತ್ತಾರೆ.

ಫಾರೀನ್ ಫೋರ್ಟ್‌ಫೋಲಿಯೊಇನ್ವೆಸ್ಟರ್ಸ್‌, ಹೆಜ್ ಫಂಡ್‌ಗಳು ಮತ್ತುಇತರ ಸೋವೆರೀನ್ ವೆಲ್ತ್ ಫಂಡ್‌ಗಳು ಎಮ್‌ಎಸ್‌ಸಿಐ ಸೂಚ್ಯಂಕಗಳನ್ನು ಹೆಚ್ಚಾಗಿ ಬಳಸುತ್ತಾರೆ.

Similar News