×
Ad

ಸದನ ಕಲಾಪದ ವಿಡಿಯೋ ಚಿತ್ರೀಕರಣ: ಕಾಂಗ್ರೆಸ್ ಸಂಸದೆ ರಜನಿ ಪಟೇಲ್ ಅಮಾನತು

Update: 2023-02-10 23:46 IST

ಹೊಸದಿಲ್ಲಿ, ಫೆ.10: ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಕುರಿತಾಗಿ ಗುರುವಾರ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಉತ್ತರಿಸುತ್ತಿದ್ದಾಗ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸುವ ದೃಶ್ಯದ ವಿಡಿಯೋವನ್ನು ಚಿತ್ರೀಕರಿಸಿ ಟ್ವಿಟರ್‌ನಲ್ಲಿ ಪ್ರಸಾರ ಮಾಡಿದ ಕಾಂಗ್ರೆಸ್ ಸದಸ್ಯೆ ರಜನಿ ಪಟೇಲ್‌(Rajni Patel)ರನ್ನು ಸದನದಿಂದ ಅಮಾನತುಗೊಳಿಸಲಾಗಿದೆ.

ಸದನದ ಕಲಾಪವನ್ನು ರಜನಿ ಪಟೇಲ್ ಚಿತ್ರೀಕರಿಸಿರುವುದು ಅಸ್ವೀಕಾರಾರ್ಹ ಚಟುವಟಿಕೆಯಾಗಿದೆ ಹಾಗೂ ಈ ಬಗ್ಗೆ ಹಕ್ಕುಚ್ಯುತಿ ಸಮಿತಿಯು ತನಿಖೆ ನಡೆಸಲಿದೆ. ಸಮಿತಿ ವರದಿ ಸಲ್ಲಿಸುವವರೆಗೆ ಅವರ ಅಮಾನತಿನಲ್ಲಿರುವರು ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್(Jagdeep Dhankar) ತಿಳಿಸಿದ್ದಾರೆ. ಸದನದ ಘನತೆಯನ್ನು ಕಾಪಾಡುವ ಉದ್ದೇಶದಿಂದ ಈ ವಿಷಯದ ಕುರಿತ ತನಿಖೆಯನ್ನು ಇತರ ಏಜೆನ್ಸಿಗಳಿಗೆ ವಹಿಸಲಾಗುವುದಿಲ್ಲವೆಂದು ಅವರು ಹೇಳಿದ್ದಾರೆ.

Similar News