×
Ad

ಸುಮಾರು 10,000 ಮಕ್ಕಳು ತಮ್ಮ ಕುಟುಂಬದೊಂದಿಗೆ ಬೀದಿಯಲ್ಲಿ ಬದುಕುತ್ತಿದ್ದಾರೆ: ಕೇಂದ್ರ ಸರ್ಕಾರ

Update: 2023-02-12 16:14 IST

ಹೊಸದಿಲ್ಲಿ: ದೇಶದಲ್ಲಿ ಸುಮಾರು 10,000 ಮಕ್ಕಳು ತಮ್ಮ ಕುಟುಂಬದೊಂದಿಗೆ ಬೀದಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಶುಕ್ರವಾರ ಲೋಕಸಭೆಗೆ ತಿಳಿಸಿದೆ ಎಂದು ndtv.com ವರದಿ ಮಾಡಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಸ್ಮೃತಿ ಇರಾನಿ, ದೇಶದಲ್ಲಿ ಬೀದಿಯಲ್ಲಿ ವಾಸಿಸುತ್ತಿರುವ ಮಕ್ಕಳ ಎಣಿಕೆ ಮಾಡುವ ಬಾಲ್ ಸ್ವರಾಜ್ ಪೋರ್ಟಲ್ ದತ್ತಾಂಶಗಳನ್ನು ಒದಗಿಸಿದರು.

ಈ ದತ್ತಾಂಶದ ಪ್ರಕಾರ, ದೇಶದಲ್ಲಿ 19,546 ಮಕ್ಕಳು ಬೀದಿಯಲ್ಲಿ ಜೀವಿಸುತ್ತಿದ್ದಾರೆ. ಈ ಪೈಕಿ 10,041 ಮಕ್ಕಳು ತಮ್ಮ ಕುಟುಂಬಗಳೊಂದಿಗೆ ಬೀದಿಯಲ್ಲಿ ವಾಸಿಸುತ್ತಿದ್ದರೆ, ಅವರಲ್ಲಿ 8,263 ಮಕ್ಕಳು ಬೆಳಗ್ಗಿನ ಹೊತ್ತು ಬೀದಿಯಲ್ಲಿದ್ದು, ರಾತ್ರಿ ವೇಳೆ ಹತ್ತಿರದಲ್ಲೇ ಇರುವ ಕೊಳಗೇರಿಗಳಿಗೆ ತಮ್ಮ ಕುಟುಂಬಗಳೊಂದಿಗೆ ವಾಪಸ್ಸಾಗುತ್ತಾರೆ ಎಂದು ತಿಳಿಸಿದರು.

ಈ ಪೈಕಿ 882 ಮಕ್ಕಳು ಯಾರದೇ ನೆರವಿಲ್ಲದೆ ಒಬ್ಬಂಟಿಯಾಗಿ ಬೀದಿಯಲ್ಲಿ ವಾಸಿಸುತ್ತಿದ್ದಾರೆ ಎಂದು ದತ್ತಾಂಶದಲ್ಲಿ ಹೇಳಲಾಗಿದೆ.

Similar News