×
Ad

ಕೆನಡಾದ ವಾಯುಕ್ಷೇತ್ರದಲ್ಲಿ ಮತ್ತೊಂದು ನಿಗೂಢ ವಸ್ತು ಪತ್ತೆ: ಅಮೆರಿಕ

Update: 2023-02-13 00:15 IST

ವಾಷಿಂಗ್ಟನ್, ಫೆ.12: ಕೆನಡಾದ ವಾಯುಕ್ಷೇತ್ರದಲ್ಲಿ ಶನಿವಾರ ಮತ್ತೊಂದು ಗುರುತಿಸಲಾಗದ ವಸ್ತು ಪತ್ತೆಯಾಗಿದ್ದು ಅದನ್ನು ಕೆನಡಾ ಮತ್ತು ಅಮೆರಿಕದ ಜಂಟಿ ಕಾರ್ಯಾಚರಣೆಯಲ್ಲಿ ಅಮೆರಿಕದ ಯುದ್ಧವಿಮಾನ ನಡೆಸಿದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿದ್ದಾರೆ.

ಅಲಸ್ಕಾ ಪ್ರಾಂತದ ಗಡಿಭಾಗದಲ್ಲಿರುವ ಯುಕೋನ್ ಪ್ರದೇಶದಲ್ಲಿ ಈ ನಿಗೂಢ ವಸ್ತುವನ್ನು ಹೊಡೆದುರುಳಿಸಲಾಗಿದೆ. ಇದರೊಂದಿಗೆ ಈ ವಾರ ಅಮೆರಿಕದ ವಾಯುಕ್ಷೇತ್ರದಲ್ಲಿ ಚೀನಾದ ಬೇಹುಗಾರಿಕೆ ಬಲೂನು ಪತ್ತೆಯಾದ ನಂತರ ಸತತ 2 ದಿನ ನಿಗೂಢ ವಸ್ತುವನ್ನು ಅಮೆರಿಕ ಹೊಡೆದುರುಳಿಸಿದೆ. ಶನಿವಾರ ನಿಗೂಢ ವಸ್ತು ಪತ್ತೆಯಾದ ಬಳಿಕ ಟ್ರೂಡೊ ಅಮೆರಿಕ ಅಧ್ಯಕ್ಷ ಬೈಡನ್ಗೆ ಹಾಗೂ ಕೆನಡಾದ ರಕ್ಷಣಾ ಸಚಿವೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಜತೆ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೊಡೆದುರುಳಿಸಿರುವ ನಿಗೂಢ ವಸ್ತುವಿನ ಅವಶೇಷಗಳನ್ನು   ಪತ್ತೆಹಚ್ಚಿ ಪರಿಶೀಲನೆ ನಡೆಸಲಾಗುವುದು ಎಂದು ಕೆನಡಾದ ಪ್ರಧಾನಿ ಹೇಳಿದ್ದಾರೆ.

ತನ್ನ ವಾಯುಪ್ರದೇಶದಲ್ಲಿ ನಿಗೂಢ ವಸ್ತು ಪತ್ತೆ: ಚೀನಾ ಹೇಳಿಕೆ

ಚೀನಾದ ಜಿಮೊ ಪ್ರಾಂತದ ಕ್ವಿಂಗ್ಡಾವೊ ಪ್ರದೇಶದ ಸಮುದ್ರದ ಮೇಲೆ ಹಾರಾಟ ನಡೆಸುತ್ತಿದ್ದ ನಿಗೂಢ ವಸ್ತುವನ್ನು ಪತ್ತೆಹಚ್ಚಲಾಗಿದ್ದು ಅದನ್ನು ಹೊಡೆದುರುಳಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಚೀನಾ ರವಿವಾರ ಹೇಳಿಕೆ ನೀಡಿದೆ.

ಸಮುದ್ರದ ಮೇಲೆ ಹಾರಾಟ ನಡೆಸುತ್ತಿದ್ದ ಈ ನಿಗೂಢ ವಸ್ತುವನ್ನು ಹೊಡೆದುರುಳಿಸಲಾಗುವುದು. ಆದ್ದರಿಂದ ಮೀನುಗಾರರು ಈ ಪ್ರದೇಶದಿಂದ ದೂರ ಇರುವಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.  

Similar News