×
Ad

ಭಾರತವನ್ನು ಹಿಂದೂರಾಷ್ಟ್ರ ಮಾಡಲು 'ಮಹಾಯಜ್ಞ' ಆರಂಭಿಸಿರುವ ಧೀರೇಂದ್ರ ಶಾಸ್ತ್ರಿಯನ್ನು ಭೇಟಿಯಾದ ಕಮಲ್ ನಾಥ್

Update: 2023-02-13 18:05 IST

ಹೊಸದಿಲ್ಲಿ: ಭಾರತವನ್ನು ಹಿಂದೂ ರಾಷ್ಟ್ರ ಮಾಡಲು 'ಮಹಾಯಜ್ಞ' ಆರಂಭಿಸಿರುವ ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ಆಚಾರ್ಯ ಧೀರೇಂದ್ರ ಶಾಸ್ತ್ರಿಯನ್ನು ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಸೋಮವಾರ ಭೇಟಿಯಾಗಿದ್ದಾರೆ. 

ಭಾಗೇಶ್ವರ ಧಾಮಕ್ಕೆ ಭೇಟಿ ನೀಡಿರುವ ಕಮಲ್‌ ನಾಥ್‌ ರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್‌ ಆಗಿದೆ. 9 ಬಾರಿಯ ಸಂಸದ ಕಮಲ್‌ ನಾಥ್‌ ಹಿಂದುತ್ವವಾದಿ ಸ್ವಾಮಿಯನ್ನು ಭೇಟಿಯಾಗಿರುವುದರ ಬಗ್ಗೆ ಅಪಸ್ವರಗಳೆದ್ದಿವೆ.

ಮೌಢ್ಯ ಹಾಗೂ ದ್ವೇಷವನ್ನು ಪ್ರಚೋದಿಸುವ ವಿವಾದಾತ್ಮಕ ವ್ಯಕ್ತಿಯಾಗಿರುವ ಆಚಾರ್ಯ ಧೀರೇಂದ್ರ ಶಾಸ್ತ್ರಿಯನ್ನು ಕಮಲ್‌ ನಾಥ್‌ ಭೇಟಿಯಾಗಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಒಳಗಾಗಿದೆ.

Similar News