ಸಿಕ್ಕಿಮ್‌ನಲ್ಲಿ 4.3 ತೀವ್ರತೆಯ ಭೂಕಂಪ
Update: 2023-02-13 20:41 IST
ಗ್ಯಾಂಗ್ಟಕ್,ಫೆ.13: ಈಶಾನ್ಯ ರಾಜ್ಯ ಸಿಕ್ಕಿಮ್‌ನಲ್ಲಿ ಸೋಮವಾರ ನಸುಕಿನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3ರಷ್ಟಿದ್ದು,ಯಾವುದೇ ಜೀವಹಾನಿ ಅಥವಾ ಆಸ್ತಿಹಾನಿಯಾಗಿರುವ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.
ನಸುಕಿನ 4:15ರ ಸುಮಾರಿಗೆ ಪಶ್ಚಿಮ ಸಿಕ್ಕಿಂ ಜಿಲ್ಲೆಯ ಯುಕ್ಸೊಮ್‌ನಿಂದ ಸುಮಾರು 70 ಕಿ.ಮೀ.ದೂರದಲ್ಲಿ ನೆಲದಡಿ 10 ಕಿ.ಮೀ.ಆಳದಲ್ಲಿ ಭೂಕಂಪ ಸಂಭವಿಸಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಮಾಹಿತಿಯನ್ನು ನೀಡಿದೆ.
ಯುಕ್ಸೊಮ್ ಪಟ್ಟಣದಲ್ಲಿ ಮತ್ತು ಸುತ್ತುಮುತ್ತ ಕಂಪನಗಳ ಅನುಭವವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ಇದನ್ನು ಓದಿ: ಸೂಕ್ಷ್ಮ ಭೂಕಂಪನಗಳು ಭಾರತದಲ್ಲಿ ಬೃಹತ್ ಭೂಕಂಪದ ಅಪಾಯವನ್ನು ತಪ್ಪಿಸುತ್ತಿವೆ: ತಜ್ಞರ ಅನಿಸಿಕೆ