×
Ad

ಉಡುಪಿ: ಸ್ಪರ್ಶ ಕುಷ್ಟರೋಗ ನಿಯಂತ್ರಣ ಅಭಿಯಾನ

Update: 2023-02-13 21:25 IST

ಉಡುಪಿ: ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದೊಂದಿಗೆ ಸ್ಪರ್ಶ ಕುಷ್ಟರೋಗ ಆಂದೋಲನ ಹಾಗೂ ನಿಯಂತ್ರಣ ಕಾರ್ಯಕ್ರಮವನ್ನು ನಿಟ್ಟೂರು ಪ್ರೌಢಶಾಲೆ ತಾಂಗದಗಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಾಮಿನಿ, ಶಾಲೆಯ ಮುಖ್ಯೋಪಾಧ್ಯಾಯರಾದ ಅನಸೂಯ, ನಗರಸಭಾ  ಸದಸ್ಯ ಗಿರಿಧರ್ ಆಚಾರ್ಯ, ಮಣಿಪಾಲ ಕೆಎಂಸಿ ಆಸ್ಪತ್ರೆ ತಜ್ಞವೈದ್ಯ ಡಾ. ಕಿರಣ್ ಉಪಸ್ಥಿತರಿದ್ದರು.

ಆರೋಗ್ಯ ಶಿಕ್ಷಕ ಭರತ್ ಮಕ್ಕಳಿಗೆ ಕುಷ್ಟ ರೋಗದ ಬಗ್ಗೆ ಮಾಹಿತಿ ನೀಡಿದರು. ನಿಟ್ಟೂರು ಪ್ರೌಢಶಾಲೆಯ ಮಕ್ಕಳಿಂದ ಶಾಲೆಯಿಂದ ಅಂಬಾಗಿಲು ರಾಮ್ ಸರ್ಕಲ್‌ವರೆಗೆ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಕೆಎಂಸಿ ಆಸ್ಪತ್ರೆ ವತಿಯಿಂದ ಮಕ್ಕಳಿಗೆ  ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.

ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Similar News