ಫೆ.17ರಂದು ತಿರುಮಲೇಶ್ ಸಂಸ್ಮರಣೆ
Update: 2023-02-16 20:44 IST
ಉಡುಪಿ: ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಿಧನರಾದ ಕನ್ನಡದ ಖ್ಯಾತ ಕವಿ, ವಿಮರ್ಶಕ ಪ್ರೊ.ಕೆ.ವಿ.ತಿರುಮಲೇಶ್ ಅವರ ನೆನಪಿನಲ್ಲಿ ’ಅಂಡರ್ ಸ್ಟ್ಯಾಂಡಿಂಗ್ ತಿರುಮಲೇಶ್’ (ತಿರುಮಲೇಶರನ್ನು ತಿಳಿಯೋಣ) ಕಾರ್ಯಕ್ರಮವನ್ನು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ಫೆ.17ರ ಗುರುವಾರ ಸಂಜೆ ಆಯೋಜಿಸಲಾಗಿದೆ.
ಹಿರಿಯ ವಿಮರ್ಶಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಶಬ್ದನ ಅನುವಾದ ಸಂಸ್ಥೆಯ ಗೌರವ ನಿರ್ದೇಶಕ ಎಸ್.ಆರ್. ವಿಜಯಶಂಕರ, ತಿರುಮಲೇಶ್ ಕುರಿತು ಆನ್‌ಲೈನ್‌ನಲ್ಲಿ ಸಂಜೆ ೪:೧೫ಕ್ಕೆ ಉಪನ್ಯಾಸ ನೀಡಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಆಸಕ್ತರು ಮೈಕ್ರೋಸಾಫ್ಟ್ ಲಿಂಕ್‌ನ್ನು -Join here: https://bit.ly/3YVgV8U- ಬಳಸಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಅಥವಾ ಮಾಹೆಯ ಗಾಂಧಿಯನ್ ಸೆಂಟರ್‌ನ ನೆಲ ಮಹಡಿಯ ಕೊಠಡಿಯಲ್ಲಿ ಉಪನ್ಯಾಸವನ್ನು ಕೇಳಬಹುದು ಎಂದು ಪ್ರಕಟಣೆ ತಿಳಿಸಿದೆ.