×
Ad

ಜಾರ್ಖಂಡ್: ಕಟ್ಟಡದ ಮೇಲ್ಛಾವಣಿಯಿಂದ ಬಾಲಕಿಯನ್ನು ಕೆಳಗೆ ತಳ್ಳಿ ಹತ್ಯೆಗೈದ ಯುವಕರು

Update: 2023-02-16 21:54 IST

ಧನ್ಬಾದ್, ಫೆ. 16: ನಾಲ್ಕು ಮಹಡಿಯ ಅಪಾರ್ಟ್‌ಮೆಂಟ್‌ನ ಮೇಲ್ಛಾವಣಿಯಿಂದ 16 ವರ್ಷದ ಬಾಲಕಿಯನ್ನು ನಾಲ್ವರು ಯುವಕರು ಕೆಳಗೆ ತಳ್ಳಿ ಹತ್ಯೆಗೈದ ಘಟನೆ ಜಾರ್ಖಂಡ್ ನ ಧನ್ಬಾದ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ರಾಜ್ಯ ರಾಜಧಾನಿ ರಾಂಚಿಯಿಂದ 170 ಕಿ.ಮೀ. ದೂರದಲ್ಲಿರುವ ಬರ್ವಾಡ್ಡ ಪೊಲೀಸ್ ಠಾಣಾ ವ್ಯಾಪ್ತಿಯ ಭೆಲಾಟಂಡ್ ಪ್ರದೇಶದಲ್ಲಿ ಈ ಘಟನೆ ಬುಧವಾರ ಸಂಜೆ 5.30ರಿಂದ 6.30ರ ನಡುವೆ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಮೃತಪಟ್ಟ ಬಾಲಕಿಯ ತಾಯಿ ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಇಬ್ಬರು ಯುವಕರು ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

‘‘ಎಫ್ಐಆರ್ ಆಧಾರದಲ್ಲಿ ಬುಧವಾರ ರಾತ್ರಿ ಇಬ್ಬರು ಯುವಕರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ’’ ಎಂದು ಪೊಲೀಸ್ ಉಪ ಅಧೀಕ್ಷಕ ಅಮರ್ ಕುಮಾರ್ ಪಾಂಡೆ(Amar Kumar Pandey) ಹೇಳಿದ್ದಾರೆ. ಬಾಲಕಿ ಧನ್ಬಾದ್ ಮೂಲದ ಕಾನ್ವೆಂಟ್ ನಲ್ಲಿ 12ನೇ ತರಗತಿ ವಿದ್ಯಾರ್ಥಿಯಾಗಿದ್ದಳು. ‘‘ತನ್ನ ಮಗಳಿಗಿಂತ ಹಿರಿಯನಾದ ಅಪಾರ್ಟ್‌ಮೆಂಟ್‌ನ ಹುಡುಗನೊಂದಿಗೆ ಆಕೆ ಆಗಾಗ ಮಾತನಾಡುತ್ತಿದ್ದಳು’’ ಎಂದು ಬಾಲಕಿಯ ತಾಯಿ ಹೇಳಿದ್ದಾರೆ.

Similar News