ಕಥುವಾ ಸಂತ್ರಸ್ತೆ ಹೆಸರು ಬಹಿರಂಗಪಡಿಸಿದ ಮಾಧ್ಯಮಗಳಿಂದ ಸಂಗ್ರಹಿಸಿದ ದಂಡ ಸಂತ್ರಸ್ತರ ನಿಧಿಗೆ: ಕೋರ್ಟ್‌ ಆದೇಶ

Update: 2023-02-17 13:36 GMT

ಹೊಸದಿಲ್ಲಿ: ಕಥುವಾ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿದ ಮಾಧ್ಯಮ ಸಂಸ್ಥೆಗಳಿಂದ ದಂಡ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಜಮ್ಮು ಕಾಶ್ಮೀರ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ನಡೆಸುವ  ಸಂತ್ರಸ್ತರ ಪರಿಹಾರ ನಿಧಿಗೆ ವರ್ಗಾಯಿಸುವಂತೆ ದಿಲ್ಲಿ ಹೈಕೋರ್ಟ್‌ ಗುರುವಾರ ತನ್ನ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸೂಚಿಸಿದೆ.

ನ್ಯಾಯಾಲಯವು ಈ ಹಿಂದೆ 15 ಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳಿಗೆ ತಲಾ ರೂ 10 ಲಕ್ಷ ದಂಡ ಪಾವತಿಸುವಂತೆ ಸೂಚಿಸಿ ನೋಟಿಸ್‌ ಜಾರಿಗೊಳಿಸಿತ್ತು. ಈ ಹಣವನ್ನು ಲೈಂಗಿಕ ಹಿಂಸೆಯ ಸಂತ್ರಸ್ತರು ಅಥವಾ ಅವರ ಕುಟುಂಬಗಳಿಗೆ ಸಹಾಯಕ್ಕಾಗಿ ಬಳಸಲಾಗುವುದು.

ಜನವರಿ 10, 2018 ರಂದು ಜಮ್ಮು ಕಾಶ್ಮೀರದ ಕಥುವಾ ಸಮೀಪದ ತನ್ನ ಗ್ರಾಮದಿಂದ ನಾಪತ್ತೆಯಾಗಿದ್ದ 10 ವರ್ಷದ ಬಾಲಕಿಯೊಬ್ಬಳ ಮೃತದೇಹ ಅದೇ ಪ್ರದೇಶದಲ್ಲಿ ಒಂದು ವಾರದ ನಂತರ ಪತ್ತೆಯಾಗಿತ್ತು.

Similar News