×
Ad

ರಾಷ್ಟ್ರಮಟ್ಟದ ಗುಂಡು ಎಸೆತ ಸ್ಪರ್ಧೆ: ಅನುರಾಗ್ ಗೆ ಚಿನ್ನದ ಪದಕ

Update: 2023-02-17 19:23 IST

ಉಡುಪಿ : ಬಿಹಾರ ಪಾಟ್ನಾದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಇಂಟರ್ ಜಿಲ್ಲಾ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಲೆವೂರು ಕೇಂದ್ರೀಯ ವಿದ್ಯಾಲಯದ ೯ನೇ ತರಗತಿಯ ವಿದ್ಯಾರ್ಥಿ ಅನುರಾಗ್ ಜಿ. ಗುಂಡು ಎಸೆತ ಸ್ಪರ್ಧೆಯ 16 ವರ್ಷ ಒಳಗಿನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಇವರು ಕಾರ್ಕಳ ಬಿಎಸ್‌ಎನ್‌ಎಲ್ ಉದ್ಯೋಗಿ ಗುರುರಾಜ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ರಮಣಿ ದಂಪತಿ ಪುತ್ರ. ಇವರು ಅಂತಾರಾಷ್ಟ್ರೀಯ ಕ್ರೀಡಾಪಟು ಶಾಲಿನಿ ರಾಜೇಶ್ ಶೆಟ್ಟಿ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

Similar News