ಕುಂಭಾಶಿ ಗ್ರಾಪಂ ಚುನಾವಣೆ: ಅಮೃತಾ ಅವಿರೋಧ ಆಯ್ಕೆ
Update: 2023-02-17 20:06 IST
ಕುಂದಾಪುರ : ಕುಂಭಾಶಿ ಗ್ರಾಮಪಂಚಾಯತ್ ವ್ಯಾಪ್ತಿಯ ಮತದಾರ ಕ್ಷೇತ್ರ ೨ರಲ್ಲಿ ತೆರವಾಗಿದ್ದ ಪರಿಶಿಷ್ಟ ಪಂಗಡ ಮಹಿಳಾ ಮಿಸಲಾತಿ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕುಂಭಾಶಿ ಅಂಬೇಡ್ಕರ್ ನಗರ ನಿವಾಸಿ ಅಮೃತಾ ಕಾಂಗ್ರೆಸ್ ಬೆಂಬಲದೊಂದಿಗೆ ಅವಿರೋಧವಾಗಿ ಆಯ್ಕೆಯಾದರು.
ವಾರಾಹಿ ನೀರಾವರಿ ಯೋಜನೆಯ ಇಂಜಿನಿಯರ್ ಪ್ರಸನ್ನ ಕುಮಾರ್ ಚುನಾವಣಾಧಿಕಾರಿಯಾಗಿ, ಕುಂಭಾಶಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಯ ರಾಮ ಶೆಟ್ಟಿ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ನೂತನವಾಗಿ ಆಯ್ಕೆಯಾದ ಸದಸ್ಯೆಗೆ ಪ್ರಮಾಣ ಪತ್ರ ನೀಡಿದರು.
ಈ ಸಂದರ್ಭ ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಅಣ್ಣಯ್ಯ ಪುತ್ರನ್ ಕುಂಭಾಶಿ, ಗೋಪಾಲ ಮೊದಲಾದವರಿದ್ದರು.