ಉಡುಪಿ: ಲೋಕಾಯುಕ್ತ ಇನ್ಸ್‌ಸ್ಪೆಕ್ಟರ್‌ನ ಸೈಕಲ್ ಕಳವು
Update: 2023-02-17 20:42 IST
ಉಡುಪಿ: ಉಡುಪಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ರಫೀಕ್ ಎಂಬವರ ವಸತಿ ಗೃಹದಲ್ಲಿ ನಿಲ್ಲಿಸಿದ್ದ ಎರಡು ಸೈಕಲ್ ಕಳವಾಗಿರುವ ಬಗ್ಗೆ ವರದಿಯಾಗಿದೆ.
ನಗರದಲ್ಲಿರುವ ಪೊಲೀಸ್ ಅಧಿಕಾರಿಗಳ ವಸತಿಗೃಹದ ಶೆಡ್‌ನಲ್ಲಿ ನಿಲ್ಲಿಸಿದ್ದ ಎರಡು ಸೈಕಲ್‌ನ್ನು ಕಳ್ಳರು ಫೆ.13ರ ಬೆಳಗ್ಗೆಯಿಂದ ಫೆ.14ರ ಸಂಜೆಯ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 16,100 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.