ಸಬ್ಸಿಡಿ ಡೀಸೆಲ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ಎಚ್ಚರಿಕೆ
Update: 2023-02-17 21:24 IST
ಉಡುಪಿ: ಆಳಸಮುದ್ರ ಬೋಟುಗಳಿಗೆ ಸರಕಾರವು ನೀಡುತ್ತಿರುವ ಸಬ್ಸಿಡಿ ಡಿಸೀಲ್‌ನ್ನು ಕೆಲವು ದಿನಗಳಿಂದ ಬಿಡುಗಡೆಗೊಳಿಸದೆ ಇರು ವುದರಿಂದ ನೂರಾರು ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಕೋಟಿ ಗಟ್ಟಲೆ ವ್ಯವಹಾರ ನಡೆಸುವ ಕರಾವಳಿ ಪ್ರದೇಶದ ಮೀನುಗಾರಿಕಾ ಉದ್ಯಮ ಕಳೆದ ಹಲವು ದಿನಗಳಿಂದ ಸ್ದಗಿತ ಗೊಂಡು ನಷ್ಟವನ್ನು ಅನುಭವಿಸಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಹೇಳಿದ್ದಾರೆ.
ಇದರಿಂದ ಬೋಟು ಮಾಲಕರು ಸಾಲದ ಕಂತನ್ನು ಕಟ್ಟಲು ಹರಸಾಹಸ ಪಡುವಂತಾಗಿದೆ. ಸರಕಾರ ಮೀನುಗಾರರ ಈ ಸಂಕಷ್ಠಕ್ಕೆ ಸ್ಪಂದಿಸದೆ ಹೋದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಅಶೋಕ್‌ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.