×
Ad

ನಿಕ್ಕಿ ಯಾದವ್ ಹತ್ಯೆ ಪ್ರಕರಣ: ಸಾಹಿಲ್ ಗೆಹ್ಲೋಟ್ ತಂದೆ ಸಹಿತ ಐವರ ಬಂಧನ

Update: 2023-02-18 12:11 IST

ಹೊಸದಿಲ್ಲಿ: ನಿಕ್ಕಿ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ   24 ವರ್ಷದ ಸಾಹಿಲ್ ಗೆಹ್ಲೋಟ್‌ನ ತಂದೆ, ಇಬ್ಬರು ಸೋದರ ಸಂಬಂಧಿಗಳು ಹಾಗೂ  ಇಬ್ಬರು ಸ್ನೇಹಿತರು ಸೇರಿದಂತೆ ಐವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

" ಕೂಲಂಕಷವಾಗಿ ವಿಚಾರಣೆ ನಡೆಸಿ ಹತ್ಯೆಗೆ ಸಂಬಂಧಿಸಿದಂತೆ ಎಲ್ಲರ ಪಾತ್ರವನ್ನು ಪರಿಶೀಲಿಸಿದ ನಂತರ ಸಾಹಿಲ್ ತಂದೆ ವೀರೇಂದ್ರ ಸಿಂಗ್, ಇಬ್ಬರು ಸೋದರ ಸಂಬಂಧಿಗಳಾದ ಆಶಿಶ್ ಹಾಗೂ  ನವೀನ್ ,  ಸಾಹಿಲ್ ಗೆಹ್ಲೋಟ್‌ನ ಇಬ್ಬರು ಸ್ನೇಹಿತರಾದ ಅಮರ್ ಮತ್ತು ಲೋಕೇಶ್ ಸೇರಿದಂತೆ ಎಲ್ಲಾ ಐವರು ಸಹ ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ವಿಶೇಷ ಪೊಲೀಸ್ ಕಮಿಷನರ್ (ಅಪರಾಧ) ) ರವೀಂದ್ರ ಯಾದವ್ ಹೇಳಿದರು.

ದಿಲ್ಲಿ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿರುವ ನವೀನ್, ಪ್ರಮುಖ ಆರೋಪಿ ಸಾಹಿಲ್ ಗೆಹ್ಲೋಟ್‌ನ ಸಂಬಂಧಿ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಪೊಲೀಸ್ ವಶದಲ್ಲಿರುವ ಗೆಹ್ಲೋಟ್ ನನ್ನು ಸುದೀರ್ಘ ವಿಚಾರಣೆ ನಡೆಸಲಾಗಿದೆ.

ಸಾಹಿಲ್ ನನ್ನು  ಬಂಧಿಸಿದಾಗಿನಿಂದ, ತನ್ನ ಗೆಳತಿ ನಿಕ್ಕಿ ಯಾದವ್ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ  ಪೊಲೀಸರ ಪ್ರಕಾರ, ನಿಕ್ಕಿ ಹಾಗೂ ಸಾಹಿಲ್ ಈಗಾಗಲೇ 2020 ರಲ್ಲಿ ತಮ್ಮ ವಿವಾಹವನ್ನು ವಿಧಿವತ್ತಾಗಿ ಮಾಡಿಕೊಂಡಿದ್ದರು. ನಿಕ್ಕಿ ನಿಜವಾಗಿ ಆತನ ಪತ್ನಿಯೇ ಹೊರತು ಲಿವ್-ಇನ್ ಪಾಲುದಾರಳಲ್ಲ ಎಂದು ವಿಶೇಷ ಆಯುಕ್ತರು ತಿಳಿಸಿದ್ದಾರೆ.

ಆದ್ದರಿಂದ, ಫೆಬ್ರವರಿ 10 ರಂದು ಸಾಹಿಲ್  ಕುಟುಂಬವು ಬೇರೊಬ್ಬ ಮಹಿಳೆಯೊಂದಿಗೆ ನಿಗದಿಪಡಿಸಿದ ಮದುವೆಯನ್ನು ಆಗದಂತೆ ಆಕೆ ಸಾಹಿಲ್ ಗೆ ಮನವಿ ಮಾಡುತ್ತಿದ್ದಳು ಎಂದು ಅವರು ಹೇಳಿದರು. ನಿಕ್ಕಿಗೆ ಮನವರಿಕೆ ಮಾಡಿಕೊಳ್ಳುವಲ್ಲಿ ವಿಫಲವಾದ ಸಾಹಿಲ್ ಅಂತಿಮವಾಗಿ ಆಕೆಯ ಕೊಲೆ ನಡೆಸಿದ್ದಾಗಿ ತಿಳಿದುಬಂದಿದೆ.

Similar News